Header Ads
Header Ads
Header Ads
Breaking News

ದೇಯಿ ಬೈದೆತಿ ಪುತ್ಥಳಿಗೆ ಅಪಮಾನ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ

ಪುತ್ತೂರು; ತುಳುನಾಡಿನ ವೀರಪುರುಷರಾದ ಕೋಟಿಚೆನ್ನಯರ ತಾಯಿ ದೇಯಿ ಬೈದೆತಿ ಪುತ್ಥಳಿಗೆ ಅಪಮಾನ ಮಾಡಿದ ಆರೋಪಿಯ ವಿರುದ್ಧ ಪುತ್ತೂರು ಬಸ್ ನಿಲ್ದಾಣದ ಗಾಂಧಿಕಟ್ಟೆ ಬಳಿ ಹಿಂದೂ ಜಾಗರಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಹಿಂದೂ ಮುಖಂಡರಾದ ಕೆದಿಲ ಗಣರಾಜ್ ಭಟ್ ಮಾತನಾಡಿ, ದೇಯಿ ಬೈದೆತಿ ನೆನಪಿಗೋಸ್ಕರ ಸರಕಾರದಿಂದ ನಿರ್ಮಿಸಲ್ಪಟ್ಟ ದೇಯಿ ಬೈದೆತಿ ಔಷಧಿ ವನದಲ್ಲಿ ಒಬ್ಬ ಮತಾಂಧ ಅನ್ಯಕೋಮಿನ ವ್ಯಕ್ತಿ ಪುತ್ಥಳಿ ಎದೆಗೆ ಕೈ ಹಾಕಿ ಅಶ್ಲೀಲ ರೀತಿಯಲ್ಲಿ ಭಾವಚಿತ್ರ ತೆಗೆದು ಜಾಲತಾಣದಲ್ಲಿ ಹರಿಯಬಿಟ್ಟಿರುವುದು ಹಿಂದೂ ಸಮಾಜಕ್ಕೆ ಅವಮಾನ ಮಾಡಿದಂತೆ. ಇಂತಹ ಕುಕೃತ್ಯ ಮಾಡಿದಾತ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾನೆ. ಹಿಂದುಗಳ ಪವಿತ್ರ ತಾಣದಲ್ಲಿ ಈತ ಮಾಡಿರುವ ಕೃತ್ಯ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವಂತದಾಗಿದ್ದು, ತನ್ನ ಹೀನ ಮನಸ್ಥಿತಿಯ ಮೂಲಕ ನಾಡಿನ ಜನತೆಯ ಆತ್ಮಸ್ಥೆರ್ಯವನ್ನು ಪ್ರಶ್ನಿಸಿರುವ ಕೆಲಸ ಮಾಡಿರುವುದಕ್ಕೆ ಹಿಂದುಗಳು ಉತ್ತರ ನೀಡಲು ಹಿಂದೆಗೆಯುವುದಿಲ್ಲ ಎಂದರು.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಕೆ‌ಎಫ್‌ಡಿ ಸಂಘಟನೆ ಕಾರ್ಯಕರ್ತರಾದ ಮತಾಂಧ ವ್ಯಕ್ತಿ ದೇಯಿ ಬೈದೆತಿಗೆ ಮಾತ್ರವಲ್ಲ. ಸಮಾಜದ ತಾಯಿಗೆ ಅಪಮಾನ ಮಾಡಿದ್ದಾನೆ. ದೇಯಿ ಬೈದೆತಿ ಎದೆಗೆ ಕೈಹಾಕಿದ ಈತನ ಕೈಯನ್ನು ಕಡಿದು ಅದೇ ತಾಯಿಯ ಪಾದಗಳಿಗೆ ಅರ್ಪಿಸಿದಾಗ ಮಾತ್ರ ಇಂತಹ ಮತಾಂಧ ಶಕ್ತಿಗಳಿಗೆ ತಕ್ಕ ಉತ್ತರ ನೀಡಿದಂತಾಗುತ್ತದೆ. ಕೆ‌ಎಫ್‌ಡಿ,ಎಸ್‌ಡಿಪಿ‌ಐ ಯಂತಹ ಮತಾಂಧ ಸಂಘಟನೆಗಳನ್ನು ನಿಷೇಧ ಮಾಡಬೇಕು. ಇವರ ಪ್ರೇರಣೆಗಳಿಂದಲೇ ಹನೀಫ್ ನಂತವರು ಕುಕೃತ್ಯ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಓರ್ವನನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ. ಆದರೆ ಈತನೊಂದಿಗೆ ೫ ಮಂದಿ ಕೆ‌ಎಫ್‌ಡಿ ಸಂಘಟನೆ ಕಾರ್ಯಕರ್ತರು ಶಾಮೀಲಾಗಿದ್ದಾರೆ. ಇವರನ್ನು ತಕ್ಷಣ ಬಂಧಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಮೂಲಕ ಜಿಲ್ಲೆಯನ್ನು ಬಂದ್ ಮಾಡುವ ಅನಿವಾರ್ಯತೆ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಹಿಂದು ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅಜಿತ್ ಹೊಸಮನೆ, ತಾಲೂಕು ಅಧ್ಯಕ್ಷ ಸಚಿನ್ ಪಾಪೆಮಜಲು, ಬಿಜೆಪಿ ಮುಖಂಡರಾದ ರಾಜೇಶ್ ಬನ್ನೂರು, ಶಂಭು ಭಟ್, ಚಂದ್ರಶೇಖರ್ ಬಪ್ಪಳಿಗೆ,ಆರ್.ಸಿ ನಾರಾಯಣ್, ಬಜರಂಗದಳದ ಧನ್ಯಕುಮಾರ್ ಬೆಳಂದೂರು. ರಾಜೇಶ್ ಪೆರಿಗೇರಿ ಮೊದಲಾದವರು ನೇತೃತ್ವ ವಹಿಸಿದ್ದರು.

ಅನೀಶ್ ಪುತ್ತೂರು

Related posts

Leave a Reply