Header Ads
Header Ads
Header Ads
Breaking News

ದೇಯಿ ಬೈದೆತಿ ಪುತ್ಥಳಿಗೆ ಅವಮಾನ ಇನ್ನೋರ್ವ ಅರೋಪಿಯನ್ನು ಬಂಧಿಸಿ ಪುತ್ತೂರಿನಲ್ಲಿ ಬಿಲ್ಲವ ಸಂಘ ಆಗ್ರಹ

 

ಪುತ್ತೂರು: ತುಳುನಾಡಿನ ಐತಿಹಾಸಿಕ ವೀರಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಪುತ್ಥಳಿಗೆ ಅವಮಾನ ಮಾಡಿರುವ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು ಉತ್ತಮ ಕೆಲಸ. ಆದರೆ ಆರೋಪಿಯು ಮೂರ್ತಿಯ ಬಳಿ ಅಶ್ಲೀಲ ಭಂಗಿಯಲ್ಲಿ ಕುಳಿತಿದ್ದಾಗ ಫೋಟೋ ತೆಗೆದ ವ್ಯಕ್ತಿಯೂ ಅಪರಾಧಿ. ಈತನನ್ನು ತಕ್ಷಣ ಬಂಧಿಸಬೇಕು ಎಂದು ಪುತ್ತೂರು ತಾಲೂಕು ಬಿಲ್ಲವ ಸಂಘ ಆಗ್ರಹಿಸಿದೆ.

ಸೋಮವಾರ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆರ್.ಸಿ.ನಾರಾಯಣ್ ರೆಂಜ ಮಾತನಾಡಿ, ಅರಣ್ಯ ಇಲಾಖೆಯು ದೇಯಿ ಬೈದ್ಯೆತಿ ಹೆಸರಿನಲ್ಲಿ ಔಷಧವನ ನಿರ್ಮಿಸಿದೆ. ಮೇಲಾಗಿ ವನದ ಮಧ್ಯೆ ದೇಯಿ ಬೈದೆತಿ ಮತ್ತು ಬಾಲ ಕೋಟಿ ಚೆನ್ನಯರ ಮೂರ್ತಿಗಳನ್ನೂ ನಿರ್ಮಿಸಿದೆ. ಹೀಗಿರುವಾಗ ಅದೊಂದು ಪವಿತ್ರ ತಾಣವಾಗಿದೆ. ಜಾತಿ ಭೇದ ಮರೆತು ಜನತೆ ಪೂಜಿಸುವ ಕಾರಣಿಕ ಶಕ್ತಿ ಮಾತೆ ದೇಯಿ ಬೈದೆತಿ. ಹೀಗಿರುವಾಗ ಆ ಮೂರ್ತಿಗೆ ಮಾಡಿರುವ ಅವಮಾನ ಖಂಡನೀಯ. ಈ ಬಗ್ಗೆ ತಾಲೂಕು ಬಿಲ್ಲವ ಸಂಘದಿಂದ ಭಾನುವಾರ ಪೊಲೀಸ್ ದೂರು ನೀಡಿದ್ದು, ತಕ್ಷಣ ಸ್ಪಂದಿಸಿದ ಪೊಲೀಸರು ಕೇವಲ ಎರಡು ಗಂಟೆಯಲ್ಲಿ ಆಪಾದಿತನನ್ನು ಬಂಧಿಸಿ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಆದರೆ ಈತನಷ್ಟೇ ದೊಡ್ಡ ಅಪರಾಧ ಫೋಟೋ ತೆಗೆದವನೂ ಮಾಡಿದ್ದಾನೆ. ಆತನನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದರು.

Related posts

Leave a Reply