Header Ads
Header Ads
Header Ads
Breaking News

ದೇರಳಕಟ್ಟೆಗೆ ಸಿರಾಜುದ್ದೀನ್ ಖಾಸಿಮಿ ಡಿಸೆಂಬರ್ 4 ರಂದು ಆಗಮಿಸಲಿರುವ ಯುವ ವಾಗ್ಮಿ ಸುದ್ದಿಗೋಷ್ಠಿಯಲ್ಲಿ ಇಬ್ರಾಹಿಂ ಕೊಣಾಜೆ ಮಾಹಿತಿ

ಎಸ್‌ಕೆ‌ಎಸ್‌ಎಸ್‌ಎಫ್ ದೇರಳಕಟ್ಟೆ ಶಾಖೆಯ ಆಶ್ರಯದಲ್ಲಿ ಮದ್‌ಹುರ್ರಸೂಲ್ ಕಾರ್ಯಕ್ರಮದ ಅಂಗವಾಗಿ ಡಿಸೆಂಬರ್ 4 ರಂದು ಖ್ಯಾತ ಯುವ ವಾಗ್ಮಿ ಅಲ್ ಹಾಫಿಳ್ ಸಿರಾಜುದ್ದೀನ್ ಅಲ್ ಖಾಸಿಮಿ ಮತ ಪ್ರಭಾಷಣಾ ಕಾರ್ಯಕ್ರಮ ನಡೆಯಲಿದೆ ಎಂದು ಮಂಗಳೂರು ವಲಯ ಅಧ್ಯಕ್ಷರಾದ ಇಬ್ರಾಹಿಂ ಕೊಣಾಜೆ ತಿಳಿಸಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ದೇರಳಕಟ್ಟೆಯ ಗ್ರೀನ್ ಗ್ರೌಂಡ್‌ನಲ್ಲಿ ಮತ ಪ್ರಭಾಷಣ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಸಯ್ಯದ್ ಅಮೀರ್ ತಂಜ್ಞಲ್ ಕಿನ್ಯಾ ಅವರು ಚಾಲನೆ ನೀಡಲಿರುವರು. ಇನ್ನು ಕಾರ್ಯಕ್ರಮದಲ್ಲಿ ಅಬ್ಬಾಸ್ ಹಾಜಿ, ಸಚಿವ ಯು.ಟಿ. ಖಾದರ್ ಇನ್ನಿತರ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಫಾರೂಕ್ ಹಾಜಿ ಕಲ್ಲಡ್ಕ, ನೌಫಾಲ್ ಬಿ, ಮುನ್ಸಿದ್, ನೌಶಾದ್ ಉಪಸ್ಥಿತರಿದ್ದರು.
ವರದಿ: ನಾಗೇಶ್ ಕಾವೂರು ಮಂಗಳೂರು

Related posts

Leave a Reply