Header Ads
Breaking News

ದೇರಳಕಟ್ಟೆಯಲ್ಲಿ ನಡೆದ ಹುತಾತ್ಮರ ಸಂಸ್ಮರಣಾ ಕಾರ್ಯಕ್ರಮ; ಯೋಧರಿಗೆ ಸನ್ಮಾನ ಕಾರ್ಯಕ್ರಮ

ದೇರಳಕಟ್ಟೆಯ ನಿಟ್ಟೆ ಪರಿಗಣಿಸಲ್ಪಟ್ಟ ವಿವಿಯ ಪಾನೀರ್ ಕ್ಯಾಂಪಸ್‍ನಲ್ಲಿ ನಿಟ್ಟೆ ವಿವಿಯ ಎನ್‍ಎಸ್‍ಎಸ್ ಘಟಕದ ಆಶ್ರಯದಲ್ಲಿ ನಡೆದ ಹುತಾತ್ಮರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸೇನಾ ಯೋಧರನ್ನು ಸನ್ಮಾನಿಸಲಾಯಿತು.
ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿರುವ ಕರ್ನಲ್ ಕಣ್ಣೂರು ಎ.ಕೆ. ಜಯಪ್ರಕಾಶನ್ ಹಾಗೂ ಹದಿನೆಂಟನೆಯ ವರ್ಷದಲ್ಲಿ ಸೈನ್ಯಕ್ಕೆ ಸೇರಿ ಎರಡನೆಯ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿ, ಭಾರತೀಯ ಸೇವಾ ಪದಕ ಹಾಗೂ ಯುದ್ಧಪದಕ ಪುರಸ್ಕøತ ದಿವಂಗತ ವಾಮಂಜೂರು ನೈಕ್ ಲೋಕಣ್ಣ ಶೆಟ್ಟಿ ಅವರ ಪತ್ನಿ ರಾಜೀವಿ ಶೆಟ್ಟಿ ಅವರನ್ನು ಸನ್ಮಾನಿಸಿಲಾಯಿತು. ನಂತರ ಮಾತನಾಡಿದ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತರಾಮ ಶೆಟ್ಟಿ, ಧಾರ್ಮಿಕ ಹಾಗೂ ರಾಜಕೀಯ ಕಾರಣ ಹೊರತುಪಡಿಸಿ ಯಾರು ರಾಷ್ಟ್ರಕ್ಕಾಗಿ ತಮ್ಮ ಜೀವ ಬಲಿದಾನಗೈಯುತ್ತಾರೆಯೋ ಅವರು ನಿಜವಾಗಿಯೂ ಶ್ರೇಷ್ಠ ವ್ಯಕ್ತಿಗಳಾಗಿ ಸದಾಕಾಲ ಜನಮಾನಸದಲ್ಲಿ ಇರುತ್ತಾರೆ ಎಂದು ಹೇಳಿದರು. ಹುತಾತ್ಮರ ದಿನಾಚರಣೆಯ ಮೂಲಕ ಸೈನ್ಯದಲ್ಲಿ ಸೇವೆ ಸಲ್ಲಿಸಿದವರನ್ನು ನೆನಪಿಸುವ ಕಾರ್ಯ ನಿಜಕ್ಕೂ ಅಭಿನಂದನೀಯ. ಇಂತಹ ಕಾರ್ಯಕ್ರಮಗಳು ಯುವ ಸಮುದಾಯ ರಾಷ್ಟ್ರದ ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಪೂರಕವಾಗಿದೆ. ದೇಶಪ್ರೇಮದ ಕಿಚ್ಚು ಹಚ್ಚಲು ಪ್ರೇರಣೆ ಕೊಡುತ್ತದೆ ಎಂದರು.
ಕರ್ನಲ್ ಎ.ಕೆ. ಜಯಪ್ರಕಾಶನ್ ಮಾತನಾಡಿ ಯುವಜನತೆಗೆ ಭಾರತೀಯ ಸೈನ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ವಿಫುಲ ಅವಕಾಶಗಳಿದ್ದು ಅದಕ್ಕೆ ಸಿದ್ಧರಾಗಬೇಕು. ಭಾರತೀಯ ಸೇನೆ ಎಲ್ಲ ಬಗೆಯಲ್ಲೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡಿದ್ದು ಪ್ರಪಂಚದಲ್ಲಿಯೇ ಸೇನೆಯಲ್ಲಿ ಸೇವೆ ಸಲ್ಲಿಸುವವರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ, ಬಜೆಟ್‍ನಲ್ಲಿ ಅನುದಾನ ಪಡೆಯುವ ರಾಷ್ಟ್ರಗಳಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಲಯದ ಸಹ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಕರ್ನಲ್ ಸುರೇನ್ ಸುಬ್ಬಯ್ಯ, ವಿದ್ಯಾರ್ಥಿ ಅಭಿವೃದ್ಧಿ ವಿಭಾಗ ನಿರ್ದೇಶಕ ಪ್ರಸನ್ನ ಕೈಲಜೆ, ಕುಲಸಚಿವೆ ಡಾ. ಅಲ್ಕಾ ಕುಲಕರ್ಣಿ, ಅಸಿಸ್ಟೆಂಟ್ ಪ್ರೊಫೆಸರ್ಪೂನಂ ಏರ್ ಕಮಾಂಡರ್ ಎಸ್.ಕೆ. ಪೈ ಹಾಗೂ ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜನಾ ಅಧಿಕಾರಿ ಶಶಿಕುಮಾರ್ ಶೆಟ್ಟಿ, ನಿಟ್ಟೆ ವಿವಿಯ ಎನ್ ಎಸ್‍ಎಸ್ ಸಂಯೋಜನಾ ಅಧಿಕಾರಿ ಡಾ. ಸುಮಲತಾ ಶೆಟ್ಟಿ ಉಪಸ್ಥಿತರಿದ್ದರು.
ವರದಿ: ಆರೀಪ್ ಕಲ್ಕಟ್ಟ ದೇರಳಕಟ್ಟೆ

Related posts

Leave a Reply

Your email address will not be published. Required fields are marked *