Header Ads
Header Ads
Breaking News

ದೇರಳಕಟ್ಟೆಯಲ್ಲಿ ಪ್ರಗತಿಯಲ್ಲಿರುವ ರಸ್ತೆ ಕಾಮಗಾರಿ ಬೇಸಿಗೆಯಲ್ಲಿ ಧೂಳು, ಮಳೆಯಲ್ಲಿ ಕೆಸರಿನಿಂದ ಕಂಗಲಾದ ಜನತೆ ಹೊಸ ರಸ್ತೆಗೆ ಡಾಂಬರು ಹಾಕದೆ ತೊಂದರೆ ಅನುಭವಿಸುವ ಸಾರ್ವಜನಿಕರು

ದೇರಳಕಟ್ಟೆಯ ಕೆಲವು ದಿನಗಳಿಂದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಭಾಗದ ರಸ್ತೆ ಅಭಿವೃದ್ಧಿಯಿಂದ ಸಾರ್ವಜನಿಕರು ಒಂದು ಹಂತದಲ್ಲಿ ಖುಷಿ ಪಟ್ಟರೂ ಬೇಸಿಗೆಯ ಧೂಳು, ಮಳೆಯ ಕೆಸರಿನಿಂದ ಕಂಗಲಾಗಿದ್ದಾರೆ.

ಯೇನೆಪೋಯ ಆಸ್ಪತ್ರೆಯ ಬಳಿಯಿಂದ ದೇರಳಕಟ್ಟೆ ಜಂಕ್ಷನ್‌ವರೆಗೆ ವಾಹನ ನಿಬಿಡ ರಸ್ತೆಯಾಗಿದ್ದು ಈ ನಿಟ್ಟಿನಲ್ಲಿ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಿ ಹಲವು ದಿನಗಳಾಗಿದೆ. ಗುಡ್ಡ ಸಮತಟ್ಟು ಮಾಡಿ ಹೊಸ ರಸ್ತೆ ನಿರ್ಮಿಸಿ ಸಂಚಾರಕ್ಕೆ ಮುಕ್ತ ಮಾಡಲಾಗಿದ್ದು, ಹಳೆ ರಸ್ತೆ ಅಗೆದು ಹಾಕಲಾಗಿದೆ. ಹೊಸ ರಸ್ತೆ ಡಾಂಬರು ಹಾಕದ ಕಾರಣ ಧೂಳಿನಿಂದಾಗಿ ಸಾರ್ವಜನಿಕರು ಕಂಗೆಟ್ಟಿದ್ದಾರೆ.