Header Ads
Header Ads
Header Ads
Breaking News

ದೇವರು ರಥದಲ್ಲಿ ಕುಳಿತುಕೊಂಡಾಗ ನಮ್ಮನ್ನು ಅನುಗ್ರಹಿಸುತ್ತಾನೆ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅಭಿಪ್ರಾಯ

 

ಆಧ್ಯಾತ್ಮದಲ್ಲಿ ಬ್ರಹ್ಮ ಎನ್ನುವುದಕ್ಕೆ ಬೃಹತ್ ಎನ್ನುವ ಅರ್ಥವಿದೆ. ದೇವರನ್ನು ಅತೀ ಉತ್ಕೃಷ್ಟ ರೀತಿಯಲ್ಲಿ ಆರಾಧಿಸುವ ಏಕೈಕ ಮಾರ್ಗ ಇದಾಗಿದ್ದು , ದೇವರು ರಥದಲ್ಲಿ ಕುಳಿತುಕೊಂಡಾಗ ನಮ್ಮನ್ನು ಅನುಗ್ರಹಿಸುತ್ತಾನೆ ಎನ್ನುವುದು ಹಿರಿಯರ ಕಾಲದಿಂದ ಬಂದ ಸಂಪ್ರದಾಯ ಎಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರು ಅಭಿಪ್ರಾಯಪಟ್ಟರು.

ಅವರು ಸೋಮೇಶ್ವರದ ಸೋಮನಾಥ ದೇವಸ್ಥಾನದಲ್ಲಿ ಸುಮಾರು ೭೫ ಲಕ್ಷ ರೂ. ವೆಚ್ಚದಲ್ಲಿ ನ್ಯಾಯವಾದಿ ರವೀಂದ್ರನಾಥ ರೈ ಮತ್ತು ಉದ್ಯಮಿ ಮುತ್ತಪ್ಪ ರೈ ಅವರ ಸೇವೆಯಾಗಿ ನಿರ್ಮಾಣಗೊಳ್ಳಲಿರುವ ಬ್ರಹ್ಮರಥಕ್ಕೆ ವೀಳ್ಯಪ್ರಧಾನ ಕಾರ್ಯಕ್ರಮದಲ್ಲಿ ಭಾಗವಸಿ ಆಶೀರ್ವಚನ ನೀಡಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಮಾತನಾಡಿ ಧಾರ್ಮಿಕ ಕ್ಷೇತ್ರಗಳಲ್ಲಿ ಸಂಬಂಽಸಿ ಕರ್ತವ್ಯ ನಿರ್ವಹಿಸುವ ಅರ್ಚಕರಿಗೆ ಈಗಿರುವ ೭೦೦೦ ವೇತನವನ್ನು ದುಪ್ಪಟ್ಟು ಮಾಡಿದ್ದು ಮುಂದಿನ ದಿನಗಳಲ್ಲಿ ೧೪,೦೦೦ ದಷ್ಟು ವೇತನ ಪಡೆಯಲಿದ್ದಾರೆ . ಸರಕಾರ ಮುಂದೆ ನಿಂತು ಧಾರ್ಮಿಕ ಕ್ಷೇತ್ರಗಳ ಜತೆಗೆ ಅಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದ್ದು, ವಾರ್ಷಿಕ ಭಡ್ತಿಯನ್ನು ರೂ. ೨೮,೦೦೦ ದಿಂದ ರೂ. ೪೮,೦೦೦ ಕ್ಕೆ ರಾಜ್ಯ ಸರಕಾರ ಏರಿಕೆ ಮಾಡಿದ್ದು ಈ ನಿಟ್ಟಿನಲ್ಲಿ ಸಂಬಂಽತ ಇಲಾಖೆಯ ಅಽಕಾರಿಗಳು ಸಂಪೂರ್ಣವಾಗಿ ಸಹಕರಿಸಬೇಕಿದೆ ಎಂದ ಅವರು ಸೋಮೇಶ್ವರದ ಕೆರೆ ಅಭಿವೃದ್ಧಿಗೆ ಒಂದು ಕೋಟಿ, ೪೦ ಲಕ್ಷ ಮಂಜೂರುಗೊಳಿಸಿ ಅಭಿವೃದ್ಧಿಯಾಗಿದೆ. ಮತ್ತೆ ಕರೆಯ ಸುತ್ತ ಅಭಿವೃದ್ಧಿಗೆ ಒಂದು ಕೋಟಿ ಅನುದಾನಕ್ಕೆ ಪ್ರಯತ್ನಿಸಲಾಗುವುದು.

ಬ್ರಹ್ಮರಥದ ದಾನಿಗಳಲ್ಲಿ ಓರ್ವರಾದ ನ್ಯಾಯವಾದಿ ಹಾಗೂ ಸೋಮೇಶ್ವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ ಮಾತನಾಡಿ ಕಳೆದ ೧೨ ವರ್ಷದ ಹಿಂದೆ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬ್ರಹ್ಮರಥದ ಅವಶ್ಯಕತೆಯ ಬಗ್ಗೆ ಚಿಂತನೆ ನಡೆಸಿ ಈಶ್ವರನ ಭಕ್ತರಾದ ಮುತ್ತಪ್ಪ ರೈ ಅವರಲ್ಲಿ ಚರ್ಚಿಸಿದ್ದೆ. ಇದೀಗ ಪುನರ್ ಬ್ರಹ್ಮಕಲಶೋತ್ಸವದ ಸಂಭ್ರಮದ ಸಂದರ್ಭದಲ್ಲಿ ಬ್ರಹ್ಮರಥ ನಿರ್ಮಾಣದ ಕನಸಿನಂತೆ ಮುತ್ತಪ್ಪ ರೈಯವರು ರಥ ನಿರ್ಮಾಣಕ್ಕೆ ಮುಂದೆ ಬಂದಿದ್ದು,ಇಬ್ಬರು ಸೇರಿ ರಥಕ್ಕೆ ಬೇಕಾಗುವ ಹಣವನ್ನು ಭರಿಸಲಿದ್ದು, ಇನ್ನೊರ್ವ ಉದ್ಯಮಿಯಾಗಿರುವ ಉದ್ಯಮಿ ಶ್ರೀಧರ್ ಭಂಡಾರಿಯವರು ರಥ ನಿರ್ಮಾಣಕ್ಕೆ ಸಹಾಯಹಸ್ತ ನೀಡುವ ಭರವಸೆ ನೀಡಿದಾಗ ಅವರಿಂದ ಬ್ರಹ್ಮರಥದ ಕೊಟ್ಟಿಗೆ ನಿರ್ಮಾಣಕ್ಕೆ ಹಣ ನೀಡುವಂತೆ ತಿಳಿಸಿದಾಗ ಅವರು ಒಪ್ಪಿಕೊಮಡಿದ್ದಾರೆ ಒಟ್ಟಾರೆಯಾಗಿ ರಥ ಮತ್ತು ಕೊಟ್ಟಿಗೆ ನಿರ್ಮಾಣಕ್ಕೆ ಒಟ್ಟು ೭೫ ಲಕ್ಷರೂ. ವೆಚ್ಚ ತಗುಲಲಿದೆ ಎಂದರು.

ಕಾರ್ಯಕ್ರಮದಲ್ಲಿ ಧಾರ್ಮಿಕ ಪರಿಷತ್ ರಾಜ್ಯ ಸದಸ್ಯ ಪದ್ಮನಾಭ ಕೋಟ್ಯಾನ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಸೋಮೇಶ್ವರ, ಬೃಹ್ಮರಥದ ನಿರ್ಮಾಣ ಸಂಕಲ್ಪ ಮಾಡಿರುವ ರವೀಂದ್ರನಾಥ ರೈ, ವಿಜಯಲಕ್ಷ್ಮೀ ರೈ ದಂಪತಿಗಳು, ಬ್ರಹ್ಮರಥ ರಚಿಸಲಿರುವ ಶಿಲ್ಪಿ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಲಕ್ಷ್ಮಿ ನಾರಾಯಣ ಆಚಾರ್ಯ, ಸೋಮೇಶ್ವರ ದೇವಸ್ಥಾನದ ಅರ್ಚಕರಾದ ಸೂರ್ಯನಾರಾಯಣ ಹೊಳ್ಳ, ಕಾರ್ಯನಿರ್ವಹಣಾಽಕಾರಿ ಅರವಿಂದ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಧಾಕರ ಭಂಡಾರಿ, ರಮೇಶ್ ಕೊಲ್ಯ, ಲಕ್ಷ್ಮಿ ಪೂಜಾರಿ, ಪ್ರತಿಭಾ ಯು.ಎಸ್. ರುಕ್ಮಯ್ಯ, ಸೋಮಯ್ಯ ಅಮೀನ್ ಉಪಸ್ಥಿತರಿದ್ದರು.

ಸೋಮೇಶ್ವರ ಸೋಮನಾಥ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಸ್ವಾಗತಿಸಿದರು. ತೋನ್ಸೆ ಪುಷ್ಕಳ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ರಾಘವ ಉಚ್ಚಿಲ್ ವಂದಿಸಿದರು.

ವರದಿ: ಆರೀಪ್ ಕಲ್ಕಟ್ಟ ಉಳ್ಳಾಲ

Related posts

Leave a Reply