Header Ads
Breaking News

ದೇವರ ಕಾಡಿನ ನವ ದುರ್ಗೆಯರ ಕಟ್ಟೆ ನಾಶ : ಸುಜ್ಲಾನ್ ಕಂಪನಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ಇತಿಹಾಸ ಪ್ರಸಿದ್ಧ ನಂದಿಕೂರು ದೇವಳಕ್ಕೆ ಸಂಬಂದಿಸಿದ ದೇವರ ಕಾಡು(ಮುಗಿಲಗಾಡು) ಯಾವುದೋ ಉದ್ಧೇಶಕ್ಕೆ ಸರ್ಕಾರದಿಂದ ಸುಜ್ಲಾನ್ ಕಂಪನಿ ಪಡೆದಿದ್ದರೂ, ಇದೀಗ ಕಾನೂನು ಬಾಹಿರವಾಗಿ ಮತ್ತೊಂದು ಕಂಪನಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದ್ದು, ಆ ದೇವರ ಕಾಡಿನಲ್ಲಿದ್ದ ನವ ದುರ್ಗೆಯರ ಕಟ್ಟೆಯಲ್ಲಿ ಒಂದನ್ನು ಮಾತ್ರ ಉಳಿಸಿ ಉಳಿದವುಗಳನ್ನು ನಾಶಗೊಳಿಸಿದ್ದರ ವಿರುದ್ಧ ಗ್ರಾಮಸ್ಥರು ಆಕ್ರೋಶ ಗೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಹೋರಾಟಗಾರ ಗ್ರಾಮಸ್ಥ ಹಿರಿಯರಾದ ಸುಧಾಕರ್ ಶೆಟ್ಟಿ, ಬಹಳಷ್ಟು ಕಾರ್ನಿಕ ಹೊಂದಿರುವ ಈ ದೇವರ ಕಾಡನ್ನು ಸರ್ಕಾರವನ್ನು ವಂಚಿಸಿ ಸುಜ್ಲಾನ್ ಕಂಪನಿ ವಶಪಡಿಸಿಕೊಂಡಿದ್ದು, ಆ ಬಳಿಕದ ಕೆಲವೊಂದು ವಿದ್ಯಾಮಾನಗಳು ಕಂಪನಿಯನ್ನೂ ಬೆಚ್ಚಿಬೀಳಿಸಿದೆ. ಕಾಡನ್ನು ಕಡಿದು ಸಮತಟ್ಟುಗೊಳಿಸುವ ಸಂದರ್ಭ ಬೃಹತ್ ಜೆಸಿಬಿ ಯಂತ್ರವೊಂದು ಮಣ್ಣಲ್ಲಿ ಹೊತು ಹೋಗಿ ಅದನ್ನು ಮೇಲೆತ್ತಲಾಗದೆ ತಮ್ಮ ಕಾಡು ಕಡಿಯುವ ಪ್ರಯತ್ನವನ್ನು ಕೈಬಿಟ್ಟಿದ್ದರು. ಆ ಬಳಿಕ ಕಂಪನಿ ಬಹುತೇಕ ನೆಲಕಚ್ಚಿದ್ದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಆದರೆ ಕಂಪನಿಯಿಂದ ನಾಶಗೊಂಡ ದೇವರಕಾಡು ಮತ್ತೆ ಎದ್ದು ನಿಂತಿದೆ. ಇದೀಗ ಮತ್ತೆ ಕಾನೂನನ್ನು ದುರುಪಯೋಗ ಮಾಡಿಕೊಂಡ ಕಂಪನಿ ಯಾವುದೋ ಉದ್ಧೇಶಕ್ಕಾಗಿ ಪಡೆದ ಸ್ಥಳವನ್ನು ಬೇರೋಬ್ಬರಿಗೆ ನೀಡಲಾಗಿದ್ದು, ಅವರು ಹಸುರು ಕಾಡನ್ನು ಕಡಿದು ಅದರೋಳಗಿದ್ದ ನವ ದುರ್ಗೆಯರ ಧಾರ್ಮಿಕ ಹಿನ್ನಲೆಯುಳ್ಳ ಎಂಟು ಕಟ್ಟೆಗಳನ್ನು ನಾಶಗೊಳಿಸಿದ್ದು, ಒಂಭತ್ತನೇ ಕಟ್ಟೆಯನ್ನು ನಾಶಗೊಳಿಸುವ ಪ್ರಯತ್ನ ವಿಫಲಗೊಂಡಿದೆ. ಆ ಕಟ್ಟೆಯನ್ನು ಅಲ್ಲಿಯೇ ಉಳಿಸಿದ ಕುರುಹು ಇದೆ. ಅದರಲ್ಲಿದ್ದ ನಾಗದೇವರ ಹುತ್ತಗಳನ್ನೂ ಕೂಡ ನಾಶ ಮಾಡಲಾಗಿದೆ. ಈ ಹಸುರು ದೇವರ ಕಾಡು ಸಂಪೂರ್ಣ ನಾಶ ಆಗುವ ಮುನ್ನ ಇದನ್ನು ಉಳಿಸುವುದಕ್ಕಾಗಿ ಗ್ರಾಮಸ್ಥರೆಲ್ಲಾ ಸ್ವಾರ್ಥ ರಹಿತವಾಗಿ ಹೋರಾಟಕ್ಕೆ ಮುಂದಾಗುವ ಮೂಲಕ ಗ್ರಾಮವನ್ನು ಮುಂದಿನ ಪೀಳಿಗೆಗೆ ಉಳಿಸ ಬೇಕಾಗಿದೆ ಎನ್ನುತ್ತಾರೆ ಹಿರಿಯರಾದ ಸುಧಾಕರ್ ಶೆಟ್ಟಿ.

Related posts

Leave a Reply

Your email address will not be published. Required fields are marked *