Header Ads
Breaking News

ದೇವಳದ ಕಚೇರಿ ಒಳಗಡೆ ಮಕ್ಕಳಿಗೆ ಎದೆಹಾಲು ಉಣಿಸುವ ಕೊಠಡಿ : ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ನೂತನ ಕಚೇರಿ ನಿರ್ಮಾಣ

ಪುತ್ತೂರು ಮಹತ್ತೋಬಾರ ಶ್ರೀ ಮಹಾಲಿಂಗೇಶ್ವರ ದೇಸ್ಥಾನದ ಕಚೇರಿಯ ಒಳಗಡೆ ಮಕ್ಕಳಿಗೆ ತಾಯಂದಿರು ಎದೆ ಹಾಲು ಉಣಿಸುವ ಕೊಠಡಿಯನ್ನು ಇಂದು ರೋಟರಿ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಜೋಸೆಫ್ ಮ್ಯಾಥ್ಯೂರವರು ಲೋಕಾರ್ಪಣೆಗೊಳಿಸಿದರುದೇವಳಕ್ಕೆ ಬರುವ ಭಕ್ತರು ತಮ್ಮ ಸಣ್ಣ ಮಕ್ಕಳಿಗೆ ಎದೆ ಹಾಲು ಉಣಿಸಲು ಪ್ರತ್ಯೇಕ ಕೊಠಡಿಯ ಅವಶ್ಯಕತೆ ಮನಗಂಡ ಪುತ್ತೂರು ಅಸೋಸಿಯೇóಷನ್ ಅಫ್ ಸಿವಿಲ್ ಇಂಜಿನಿಯರ್ಸ್ ಮತ್ತು ರೋಟರಿ ಕ್ಲಬ್ ಪುತ್ತೂರು ಈಸ್ಟ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸುಮಾರು 1 ಲಕ್ಷಕ್ಕೂ ಮಿಕ್ಕಿ ವೆಚ್ಚದಲ್ಲಿ ಆಧುನಿಕ ವ್ಯವಸ್ಥೆಯುಳ್ಳ ಮಕ್ಕಳಿಗೆ ತಾಯಂದಿರು ಎದೆ ಹಾಲು ಉಣಿಸುವ ಕೊಠಡಿಯನ್ನು ನಿರ್ಮಿಸಿದ್ದಾರೆ. ಈ ಸಂದರ್ಭ ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಡಾ. ಶ್ಯಾಮ್ ಪ್ರಸಾದ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *