Header Ads
Header Ads
Breaking News

ದೇವಾಡಿಗ ಯುವ ವೇದಿಕೆಯಿಂದ ಗದ್ದೆ ನಾಟಿ ಅಲೆವೂರು ಗದ್ದೆಯಲ್ಲಿ ನೇಜಿ ನೆಟ್ಟ ಯುವಕರು

 

ಆಂಕರ್: ಕರಾವಳಿಯ ಸಂಸ್ಕ್ರತಿ ಹಾಗೂ ಪರಂಪರೆಯನ್ನು ಉಳಿಸುವ ಹಾಗೂ ವ್ಯವಸಾಯದ ಬಗೆಗೆ ಯುವಕರಿಗೆ ತಿಳಿಸುವ ನಿಟ್ಟಿನಲ್ಲಿ ಉಡುಪಿಯ ದೇವಾಡಿಗ ಯುವ ವೇದಿಕೆ ವತಿಯಿಂದ ನೇಜಿ ನಡುವ ಕಾರ್ಯಕ್ರಮ ನಡೆಯಿತು. ಸಮಾಜಮುಖಿ ಕಾರ್ಯಕ್ರಮಗಳನ್ನು ಉಡುಪಿಯ ದೇವಾಡಿಗ ಯುವ ವೇದಿಕೆ ಹಮ್ಮಿಕೊಳ್ಳುತ್ತಾ ಬಂದಿದ್ದು ಕಳೆದ ವರ್ಷ ಕೂಡಾ ನೇಜಿ ನಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಅಲೆವೂರಿನ ಅಯ್ಯಪ್ಪಮಂದಿರದ ಬಳಿಯ ಗದ್ದೆಯಲ್ಲಿ ನೇಜಿ ನೆಡುವ ಮೂಲಕ ಯುವ ವೇದಿಕೆಯ ಯುವಕ- ಯುವತಿಯರು ವಿಶಿಷ್ಟವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಬದಲ್ಲಿ ಯುವ ವೇದಿಕೆಯ ಶ್ರೀಧರ್ ದೇವಾಡಿಗ, ಅಶೋಕ್ ಶೇರಿಗಾರ್, ಮಂಜುನಾಥ ದೇವಾಡಿಗ, ಲಚ್ಚೇಂದ್ರ ದೇವಾಡಿಗ, ಪ್ರಭಾಕರ್ ದೇವಾಡಿಗ, ಆನಂದ ದೇವಾಡಿಗ, ಪ್ರವೀಣ್ ಬೈಲಕೆರೆ ಮುಂತಾದವರು ಉಪಸ್ಥಿತರಿದ್ದರು.

ವರದಿ: ಪಲ್ಲವಿ ಸಂತೋಶ್.

Related posts

Leave a Reply