Header Ads
Breaking News

ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ : ಒಂದೇ ದಿನದಲ್ಲಿ 63 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ

ವಿಶ್ವವನ್ನು ಕಂಗೇಡಿಸಿರುವ ಕೊರೊನಾ ಪ್ರಭಾವ ಭಾರತದಲ್ಲಿಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ಇದುವರೆಗೂ 236 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಗುರುವಾರ 173 ಇದ್ದ ಕೊರೊನಾ ಸೋಂಕಿತರ ಸಂಖ್ಯೆ ಶುಕ್ರವಾರ ಏಕಾಏಏಕಿ 236 ತಲುಪಿದ್ದು, ಒಂದೇ ದಿನ 63 ಹೊಸ ಪಾಸಿಟಿವ್ ಕೇಸ್ಗಳು ದೇಶದಲ್ಲಿ ಪತ್ತೆಯಾಗಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಭಾರತಕ್ಕೆ ಕೊರೊನಾ ವೈರಸ್ ಕಾಲಿಟ್ಟಾಗಿನಿಂದಲೂ ದಿನಕ್ಕೆ ಒಂದು, ಎರಡು, ಮೂರು ಹೀಗೆ ಕಂಡುಬರುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಶುಕ್ರವಾರ ಏಕಾಏಕಿ 63ಕ್ಕೆ ಮುಟ್ಟಿದೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 236ಕ್ಕೆ ಏರಿದೆ. ಇದರಿಂದ ಭಾರತದಲ್ಲಿ ಆತಂಕ ಶುರುವಾಗಿದ್ದು, ದೇಶದಲ್ಲಿ ನಿಧಾನವಾಗಿದ್ದ ಕೊರೊನಾ ವೈರಸ್ ವೇಗ ಪಡೆದುಕೊಂಡಿದೆ.

ಇನ್ನು, ಇದುವರೆಗೂ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 236 ತಲುಪಿದ್ದು, 4 ಜನ ಕೋವಿಡ್-19 ಕಾರಣವಾಗಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಒಟ್ಟು 52 ಜನರಲ್ಲಿ ಸೋಂಕು ಇರುವುದು ಖಚಿತವಾಗಿದ್ದು, ಕೇರಳದಲ್ಲಿ 40 ಪ್ರಕರಣಗಳು ಕಂಡುಬಂದಿವೆ. ದೆಹಲಿಯಲ್ಲಿ 26, ಕರ್ನಾಟಕದಲ್ಲಿ 15 ಕೊರೊನಾ ಪಾಸಿಟಿವ್ ಕೇಸ್ಗಳು ದೃಢವಾಗಿವೆ. ವಿಶ್ವದಾದ್ಯಂತ 11,421 ಜನ ಕೊರೊನಾದಿಂದ ಮೃತಪಟ್ಟಿದ್ದು, 2 ಲಕ್ಷ 76 ಸಾವಿರ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಇದರ ಜೊತೆ ನಾಳೆಯಿಂದ ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ನಿಷೇಧಿಸಿದ್ದು, ವೀಸಾಗಳನ್ನು ರದ್ದುಗೊಳಿಸಿದೆ. ದೇಶಾದ್ಯಂತ ಮಾಲ್, ಥಿಯೇಟರ್, ಪಬ್, ನೈಟ್ಕ್ಲಬ್, ಜಾತ್ರೆ, ಮದುವೆ ಸೇರಿ ಜನರು ಹೆಚ್ಚು ಸೇರುವ ಸ್ಥಳ, ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಿದ್ದು, ಭಾಗಶಃ ಕಂಪನಿಗಳ ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *