Header Ads
Breaking News

ದೇಶದೆಲ್ಲೆಡೆ ಲಾಕ್ ಡೌನ್ ವಿಚಾರ : ಪುತ್ತೂರಿನಲ್ಲಿ ಅಗತ್ಯ ವಸ್ತುಗಳ ಅಂಗಡಿಗಳು ಓಪನ್

ಕೊರೊನಾ ವೈರಾಣು ತಡೆ ಹಿನ್ನಲೆಯಲ್ಲಿ ಇಂದಿನಿಂದ ದೇಶದಾದ್ಯಂತ ಲಾಕ್ ಡೌನ್ ಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಕಾರಣಕ್ಕಾಗಿ ಇಂದು ಪುತ್ತೂರು ನಗರದಾದ್ಯಂತ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ-ಮುಂಗಟ್ಟುಗಳು ಬಂದ್ ಆಗಿವೆ. ಅಗತ್ಯ ವಸ್ತುಗಳಾದ ದಿನಸಿ , ತರಕಾರಿ, ಹಾಲು, ಹಣ್ಣು-ಹಂಪಲುಗಳನ್ನು ಕೊಳ್ಳಲು ಜನ ಅಂಗಡಿಗಳ ಮುಂದೆ ಮುಗಿ ಬೀಳುತ್ತಿದ್ದಾರೆ. ಅಲ್ಲದೆ ಅಂಗಡಿಗಳ ಮುಂದೆ ಸಾಲಾಗಿ ನಿಂತು ತಮ್ಮ ಸರದಿಗಾಗಿ ಕಾಯುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬಂದಿದೆ. ಪೊಲೀಸ್ ರು ರಸ್ತೆಯಲ್ಲೇ ಇದ್ದು, ಅನಗತ್ಯವಾಗಿ ಓಡಾಡುವ ವಾಹನಗಳನ್ನು ತಡೆಹಿಡಿದು ವಾಪಾಸು ಕಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Related posts

Leave a Reply

Your email address will not be published. Required fields are marked *