Header Ads
Header Ads
Breaking News

ದೇಶದ ಪ್ರಗತಿಗೆ ಕೇಂದ್ರದಿಂದ ಹಲವಾರು ಯೋಜನೆ ಕಾರ್ಯರೂಪಕ್ಕೆ ಶೋಭಾ ಕರಂದ್ಲಾಜೆ ಹೇಳಿಕೆ.

ಕಳೆದ4 ವರ್ಷಗಳಲ್ಲಿ ದೇಶದ ಜಿಡಿಪಿ ಏರಿಕೆಯಾಗಿದೆ. ದೇಶದ ಪ್ರಗತಿಗೆ ಕೇಂದ್ರ ಸರಕಾರವು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಯಶಸ್ವಿಯಾಗಿಸಿದೆ ಜೊತೆಗೆ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಗೆ ತರುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದಜ್ಲೆ ಹೇಳಿದರು.ಅವರು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕೇಂದ್ರ ಸರಕಾರವು ಅಭಿವೃದ್ಧಿ ಕೆಲಸದಲ್ಲಿ ತನ್ನ ಛಾಪನ್ನು ಹಾಕುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆವಾಜ್ ಯೋಜನೆಯಡಿ ಮನೆಗಳು ನಿರ್ಮಾಣವಾಗುತ್ತಿವೆ ಎಂದು ಹೇಳಿದರು.ಇನ್ನು ಪೆಟ್ರೋಲ್ ಬೆಲೆ ಏರಿಕೆಯ ವಿಚಾರದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯ ಆಧಾರದಲ್ಲಿ ಬೆಲೆಗಳು ನಿರ್ಧರಿತವಾಗುವುದು. ಈ ವಿಚಾರದಲ್ಲಿ ರಾಜ್ಯ ಸರಕಾರಗಳು ತೆರಿಗೆಯನ್ನು ನಿಗದಿಪಡಿಸುವ ಸಾಧ್ಯತೆಗಳಿದ್ದು, ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡಲು ಮುಂದಾಗಬಹುದು ಎಂದು ಹೇಳಿದರು.ಈ ಸಂದರ್ಭ ಬಿಜೆಪಿಯ ಮುಖಂಡರು ಹಾಜರಿದ್ದರು.

Related posts

Leave a Reply