Breaking News

ದೇಶದ ರೈತರ ಸಾಲ ಮನ್ನಾ ಮಾಡದೆ ರೈತರ ಆತ್ಮಹತ್ಯೆ ತಪ್ಪಿಸಲು ಸಾಧ್ಯವಿಲ್ಲ, ಮಂಗಳೂರಿನಲ್ಲಿ ಜನಾರ್ದನ ಪೂಜಾರಿ ಗುಡುಗು

ನಮ್ಮ ದೇಶದ ರೈತರು ಸಾಲ ಮನ್ನಾ ಮಾಡಿ ಎಂದು ಹೋರಾಟ ಮಾಡುತ್ತಿದ್ದಾರೆ. ಅಲ್ಲದೆ ಮಂಡ್ಯದಲ್ಲಿ ರೈತ ಬೆತ್ತಲೆಯಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆ ದೇಶಕ್ಕೆ ಅವಮಾನಕಾರಿ, ಪ್ರಧಾನಿ ಮೋದಿ ಮತ್ತು ರಾಜ್ಯದ ಸಿಎಂ ತಲೆ ತಗ್ಗಿಸುವ ಕೆಲಸ, ಇದನ್ನು ಮನುಷ್ಯನಾದವನು ನೋಡುವುದು ಆಸಾಧ್ಯ, ಮಾನ ಮರ್ಯಾದೆ ಇದ್ದರೆ ರಾಜಿನಾಮೆ ಕೊಡಿ ಎಂದು ಮಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ರೈತರ ಪರಿಸ್ಥಿತಿ ಬಗ್ಗೆ ಉಡಾಫೆ ಮಾಡಬೇಡಿ, ರೈತರ ಸಾಲ ಮನ್ನಾ ಮಾಡಿ, ಇಲ್ಲದಿದ್ದರೆ ಪಕ್ಷ ಚುನಾವಣೆಯಲ್ಲಿ ತಕ್ಕ ಬೆಲೆ ತೆರುತ್ತದೆ. ಮಾನವೀಯ ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಿ, ಬೇರೆ ರಾಜ್ಯಗಳಿಗೂ ಮಾದರಿಯಾಗಿ. ಇಲ್ಲದಿದ್ದರೆ ಪ್ರತಿದಿನ ಪತ್ರಿಕಾಗೋಷ್ಟಿ ನಡೆಸಲಾಗುವುದು. ಪಕ್ಷದಿಂದ ತೆಗೆದರೂ ಚಿಂತೆ ಮಾಡಲ್ಲ ಎಂದು ಪೂಜಾರಿ ಗುಡುಗಿದರು.

Related posts

Leave a Reply