Header Ads
Header Ads
Breaking News

ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ:ಎಸ್.ಎಸ್. ದಾಸಿಲ್ ಹೇಳಿಕೆ

ಕರಾವಳಿ ಕಾವಲು ಪಡೆ ವತಿಯಿಂದ ಜಾತ್ಯಾತೀಯ, ಕೋಮು ವಿರೋಧಿ, ಅಹಿಂಸೆ ಧ್ಯೇಯವನ್ನು ಹೊಂದಿದ ರಾಷ್ಟ್ರೀಯ ಏಕತಾ ಸಪ್ತಾಹ ಪಣಂಬೂರಿನ ಕೇಂದ್ರ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರಾವಳಿ ಕಾವಲು ಪಡೆಯ ಕಮಾಂಡರ್ ಎಸ್.ಎಸ್. ದಾಸಿಲ್, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ ಎಲ್ಲ ನಾಗರಿಕರು ಒಟ್ಟಾಗಿ ದೇಶದ ಪ್ರಗತಿಗೆ ಶ್ರಮಿಸಬೇಕು. ದೇಶದ ಏಕತೆಯಲ್ಲಿ ಬಲ ಅಡಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕರಾವಳಿ ಕಾವಲುಪಡೆಯ ಸಿಬ್ಬಂದಿ, ಅಧಿಕಾರಿಗಳು, ಏಕತೆಯ ಪ್ರತಿಜ್ಞೆ ಸ್ವೀಕರಿಸಿದರು. ಕೇಂದ್ರ ಅಬಕಾರಿ, ಸುಂಕ ಮತ್ತು ಜಿಎಸ್‌ಟಿ ಇಲಾಖೆಯ ನಿವೃತ್ತ ಅಧಿಕಾರಿಗಳ ಸಂಘದ ಅಧ್ಯಕ್ಷೆ ಗಿಸೆಲ್ಲೆ ಮೆಹತಾ, ಇಂಡಿಗೋ ಏರ್‌ಲೈನ್ಸ್ ನ ಗ್ರಾಹಕ ಸೇವಾ ವ್ಯವಸ್ಥಾಪಕಿ ಅರ್ಚನಾ, ಮೂಡುಬಿದರೆಯ ಪಂಡಿತ್ ಹೆಲ್ತ್ ರೆಸರ್ಟ್ ಆಂಡ್ ಸ್ಪಾ ಅಧ್ಯಕ್ಷೆ ರುಬಿ ಅಗರವಾಲ್, ಕಮಾಂಡೆಂಟ್ ಆರ್.ಕೆ. ಶರ್ಮಾ, ಉಪ ಕಮಾಂಡೆಂಟ್ ದೀಪಿಕಾ ಧಿಮನ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply