Header Ads
Header Ads
Breaking News

ದೇಶದ ಸೇನೆ ಹಾಗೂ ಯುದ್ಧವನ್ನು ಪ್ರಶ್ನಿಸೋದು ರಾಷ್ಟ್ರವಿರೋಧಿ ಚಿಂತನೆ : ನಳಿನ್ ಕುಮಾರ್ ಕಟೀಲ್

ದೇಶದ ಸೇನೆ ಹಾಗೂ ಯುದ್ಧವನ್ನು ಪ್ರಶ್ನಿಸೋದು ರಾಷ್ಟ್ರವಿರೋಧಿ ಚಿಂತನೆ. ರಾಷ್ಟ್ರದ ವಿಚಾರ ಮುಂದೆ ಬಂದಾಗ ಮನಸ್ಸಲ್ಲೂ ಇಂತಹ ಪ್ರಶ್ನೆ ಬರಕೂಡದು ಎನ್ನುವುದಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. ಸತ್ತಿರುವ ಉಗ್ರರ ಲೆಕ್ಕಾಚಾರ ಕೇಳಿದ ಪ್ರತಿಪಕ್ಷದ ನಾಯಕರ ಹೇಳಿಕೆಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ ನಳಿನ್, ಇಂದಿರಾ ಗಾಂಧಿ ಕಾಲದಲ್ಲೂ ಯುದ್ಧ ನಡೆದಿದ್ದವು. ಆ ಸಂದರ್ಭದಲ್ಲಿ ಪ್ರತಿಪಕ್ಷದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಇಂದಿರಾ ಗಾಂಧಿಯವರು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಹೊಗಳುತ್ತಾ ಅವರನ್ನು ದುರ್ಗೆ ಎಂದು ಕರೆದಿದ್ದರು. ಏಕೆಂದರೆ ರಾಷ್ಟ್ರ, ಸೇನೆ ವಿಚಾರ ಬಂದಾಗ ನಾವು ಒಂದಾಗಿರಬೇಕು ಅನ್ನೋದು ಅವರ ಕಲ್ಪನೆಯಾಗಿತ್ತು. ಆದರೆ ಈಗ ನಾವು ಯುದ್ಧಭೂಮಿಯಲ್ಲಿದ್ದೇವೆ, ಸೈನಿಕರಿಗೆ ಆತ್ಮಸ್ಥೈರ್ಯ ತುಂಬಬೇಕಿದೆ, ಅದು ಬಿಟ್ಟು ಸೇನೆ ಹಾಗೂ ಯುದ್ಧವನ್ನು ಪ್ರಶ್ನಿಸೋದು ಸರಿಯಲ್ಲ, ಅಂತಹ ಚಿಂತನೆ ಬಂದಿದೆ ಅಂತಾದರೆ ಅದು ರಾಷ್ಟ್ರ ವಿರೋಧಿ ಚಿಂತನೆ ಎಂದರು.

Related posts

Leave a Reply

Your email address will not be published. Required fields are marked *