Header Ads
Header Ads
Breaking News

ದೇಶಭಕ್ತ ಯುವಕರಿಂದ ಮಕ್ಕಳಿಗೆ ಉಚಿತ ಚಿತ್ರ ಪ್ರದರ್ಶನ : “ಉರಿ” ಚಿತ್ರ ನೋಡಿದ ಉಡುಪಿಯ ನೂರಾರು ಮಕ್ಕಳು

 ಭಾರತದ ಸೈನಿಕರ ಯಶೋಗಾಥೆ, ಶೌರ್ಯವನ್ನು ತಿಳಿಸುವ “ಉರಿ” ಚಿತ್ರ ಈಗಾಗಲೇ ಅದ್ದೂರಿ ಪ್ರದರ್ಶನವಾಗಿದೆ. ಇದೀಗ ಉಡುಪಿಯ ದೇಶ ಭಕ್ತ ಯುವಕರ ಗುಂಪು ಈ ಚಿತ್ರವನ್ನು ಉಚಿತವಾಗಿ ಮಕ್ಕಳಿಗೆ ತೋರಿಸುವ ವ್ಯವಸ್ಥೆ ಮಾಡಿದ್ದಾರೆ. ಹೌದು ಉಡುಪಿಯ ಮಲ್ಪೆಯ ದೇಶಭಕ್ತ ಯುವಕರ ಗುಂಪೊಂದು ಭಾರತದ ಸೈನಿಕರ ಬಗ್ಗೆ, ದೇಶದ ಬಗ್ಗೆ ಅಭಿಮಾನ ಹುಟ್ಟಿಸುವ ಈ ಚಿತ್ರವನ್ನು ಮಕ್ಕಳಿಗೂ ತೋರಿಸುವ ಮೂಲಕ ದೇಶದ ಮೇಲಿನ ಅಭಿಮಾನವನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.

 

ಪ್ರದರ್ಶನಕ್ಕೂ ಮೊದಲು ದೇಶದ ಗಡಿಯಲ್ಲಿ , ಯುದ್ದದಲ್ಲಿ ಭಾಗವಹಿಸಿದ ಮಾಜಿ ಸೈನಿಕರು, ಮಾಜಿ ಅಧಿಕಾರಿಗಳು ಭಾಗವಹಿಸಿದರು. ಮಾತ್ರವಲ್ಲದೇ ಗಡಿಯಲ್ಲಿ ಸೈನಿಕರ ಪರಿಸ್ಥಿತಿಯನ್ನ ಮಕ್ಕಳಿಗೆ ತಿಳಿಹೇಳಿದರು. ಉಡುಪಿ ಹಾಗೂ ಮಲ್ಪೆಯ 100ಕ್ಕೂ ಅಧಿಕ ಮಕ್ಕಳು ಈ ಚಿತ್ರವನ್ನು ನೋಡಿದರು. ಅದರಲ್ಲೂ ಮಲ್ಟಿಪ್ಲೆಕ್ಸ್ ನಲ್ಲಿ ಚಿತ್ರದ ವೀಕ್ಷಣೆಗೆ ವ್ಯವಸ್ಥೆ ಮಾಡಿರುವ ಮಲ್ಪೆಯ ಯುವಕರ ತಂಡದ ಕಾರ್ಯ ಪ್ರಯಂಸೆಗೂ ಕಾರಣವಾಯಿತು.

Related posts

Leave a Reply