Header Ads
Header Ads
Breaking News

ದೇಶವನ್ನು ಕೊಳ್ಳೆ ಹೊಡೆಯಲು ವಿವಿಧ ಪಕ್ಷದಿಂದ ಅನೈತಿಕ ಮೈತ್ರಿ:ದ.ಕ. ಜಿಲ್ಲಾ ಚುನಾವಣಾ ಸಂಚಾಲಕ ಗೋಪಾಲಕೃಷ್ಣ ಹೇರಳೆ ಹೇಳಿಕೆ

ಬಂಟ್ವಾಳ : ದೇಶವನ್ನು ಕೊಳ್ಳೆ ಹೊಡೆಯಲು ವಿವಿಧ ಪಕ್ಷಗಳು ’ಮಹಾಘಟ್ ಬಂಧನ್’ ಹೆಸರಿನಲ್ಲಿ ಅನೈತಿಕ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು , ಭ್ರಷ್ಟಾಚಾರ ರಹಿತ ಆಡಳಿತ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿಸಲು ಜನತೆ ನಿಶ್ಚಿಯಿಸಿದ್ದಾರೆ ಎಂದು ದ.ಕ.ಜಿಲ್ಲಾ ಚುನಾವಣಾ ಸಂಚಾಲಕ ಗೋಪಾಲಕೃಷ್ಣ ಹೇರಳೆ ತಿಳಿಸಿದ್ದಾರೆ.ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರಮುಖ ಬಿಜೆಪಿ ಕಾರ್ಯಕರ್ತರ ಸಿದ್ದತಾ ಸಭೆ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಸರಕಾರದ ಐದು ವರ್ಷಗಳ ಜನಪರ ಯೋಜನೆ ಹಾಗೂ ಸಾಧನೆಯನ್ನು ಮನೆ,ಮನೆಗೆ ತಲುಪಿಸುವ ಮೂಲಕ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗುವ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಮಂಡಳಿಯ ಸೂತ್ರದಡಿಯಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು. ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ವಕ್ತಾರ,ಬಂಟ್ವಾಳ ತಾಲೂಕು ಚುನಾವಣಾ ಸಂಚಾಲಕ ಹರಿಕೃಷ್ಣ ಬಂಟ್ವಾಳ,ವಿಭಾಗ ಪ್ರಭಾರಿ ಪ್ರತಾಪ ಸಂಹ ನಾಯಕ್,ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ದ.ಕ.ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ,ಯುವ ಮೋರ್ಚಾ ಪ್ರಧಾನಕಾರ್ಯದರ್ಶಿ ಸಂದೇಶ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿದ್ದರು. ಬಂಟ್ವಾಳಕ್ಷೇತ್ರ ಬಿಜೆಪಿ ಸಮಿತಿ ಪ್ರ.ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ ಸ್ವಾಗತಿಸಿದರು.ಮೋನಪ್ಪ ದೇವಸ್ಯ ವಂದಿಸಿದರು.ಬಳಿಕ ಕಾರ್ಯಕರ್ತರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.

Related posts

Leave a Reply