Header Ads
Header Ads
Breaking News

ದೇಶಾದ್ಯಂತ ಎರಡೂಕಾಲು ಲಕ್ಷ ಎಟಿ‌ಎಂ, ಅರ್ಧಕ್ಕರ್ಧ ಮುಚ್ಚಲು ಬ್ಯಾಂಕುಗಳ ನಿರ್ಧಾರ

ಎಟಿ‌ಎಂಗಳ ನಿರ್ವಹಣಾ ವೆಚ್ಚ ಭರಿಸಲು ಆಗದೆ ಬ್ಯಾಂಕ್ಗಳು ಅರ್ಧದಷ್ಟು ಎಟಿ‌ಎಂಗಳನ್ನು ಮುಚ್ಚುವ ಬಗ್ಗೆ ಗಂಭೀರ ಚಿಂತನೆ ನಡೆಸಿವೆ.
ಬ್ಯಾಂಕ್ಗಳು ಪೈಪೋಟಿ ಮೇಲೆ ಎಟಿ‌ಎಂಗಳನ್ನು ಆರಂಭಿಸಿದ್ದರಿಂದ ಒಂದು ಬೀದಿಯಲ್ಲಿ ಕನಿಷ್ಠ ಐದರಿಂದ ಆರು ಎಟಿ‌ಎಂಗಳಿವೆ. ಹೀಗೆ ದೇಶದಾದ್ಯಂತ ಸದ್ಯ, ೨.೨೫ ಲಕ್ಷ ಎಟಿ‌ಎಂಗಳಿವೆ. ಇದರಲ್ಲಿ, ಈ?ವರ್ಷಾಂತ್ಯದ ಒಳಗೆ ಅಂದಾಜು ೧ ಲಕ್ಷದಿಂದ ೧.೨೦ ಲಕ್ಷ ಎಟಿ‌ಎಂಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ಎಟಿ‌ಎಂ?ನಿರ್ವಹಣೆ ಮಾಡಲು ತಿಂಗಳಿಗೆ ರೂ. 60 ಸಾವಿರ ವೆಚ್ಚವಾಗುತ್ತಿದೆ. ಇದನ್ನು ಸರಿದೂಗಿಸಲು ಆ ಎಟಿ‌ಎಂನಲ್ಲಿ ಒಂದು ದಿನಕ್ಕೆ ಕನಿಷ್ಠ ೧೦೦ ಬಾರಿ ಹಣ ಪಡೆಯಬೇಕು.
ಬೆಂಗಳೂರು ನಗರದಲ್ಲಿ ಬ್ಯಾಂಕ್ವೊಂದರ ಕನಿಷ್ಠ ೪೦೦ ರಿಂದ ೫೦೦ ಎಟಿ‌ಎಂಗಳನ್ನು ಮುಚ್ಚಿದರೆ ಅದರಿಂದ ಬ್ಯಾಂಕ್ಗೆ ಪ್ರತಿ ತಿಂಗಳು ಅಂದಾಜು ರೂ. ೩ ಕೋಟಿ ಉಳಿತಾಯವಾಗಲಿದೆ. ಹೀಗೆ 1.20 ಲಕ್ಷ ಎಟಿ‌ಎಂಗಳನ್ನು ಮುಚ್ಚಿದರೆ ಅದರಿಂದ ಬ್ಯಾಂಕಿಂಗ್ ವಹಿವಾಟಿನಲ್ಲಿ ಪ್ರತಿ ತಿಂಗಳೂ ರೂ. 725 ಕೋಟಿಗಳಷ್ಟು ಉಳಿತಾಯವಾಗುವ ನಿರೀಕ್ಷೆ ಇದೆ.
ಅಲ್ಲದೆ ದೇಶದಲ್ಲಿರುವ ಎಟಿ‌ಎಂಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಸಾಫ್ಟ್ವೇರ್ ಮೇಲ್ದರ್ಜೆಗೆ ಏರಿಸುವ ಕಾರ್ಯ ಆರಂಭವಾಗಿದೆ. ಈ ಕಾರ್ಯ ಪೂರ್ಣಗೊಳ್ಳಲು ಇನ್ನೂ ಎರಡು ದಿನಗಳು ಬೇಕಾಗಲಿದೆ ಎಂದು ಬ್ಯಾಂಕಿನ ಉನ್ನತ ಮೂಲಗಳು ತಿಳಿಸಿವೆ.

Related posts

Leave a Reply