Header Ads
Header Ads
Breaking News

ದೇಶಿ ಹಸುಗಳ ಸೆಗಣಿಯಲ್ಲಿ  ಪೈಂಟ್ ತಯಾರಿ: ಇದು ಇರ್ದೆಯ ಆಯುರ್ವೇದ ವೈದ್ಯರ ಸಂಶೋಧನೆ

ಪುತ್ತೂರು: ಹೆಚ್ಚಿನ ಆಸೆ, ಆಕಾಂಕ್ಷೆಗಳನ್ನಿಟ್ಟು ಕಟ್ಟಿದ ಮನೆಯನ್ನು ಎಷ್ಟು ಸಾಧ್ಯವೋ, ಅಷ್ಟು ಸುಂದರವಾಗಿ ಮಾಡಲು ಪ್ರಯತ್ನಿಸದೇ ಇರುವವರು ಬಹಳ ವಿರಳ. ಅದರಲ್ಲೂ ಮನೆಯು ಅತ್ಯಂತ ಆಕರ್ಷಕವಾಗಿ ಕಾಣಲು ಬಗೆ ಬಗೆಯ ಬಣ್ಣಗಳನ್ನು ಬಳಿಯೋದು ಇದೀಗ ಫ್ಯಾಷನ್ ಕೂಡಾ ಆಗಿದೆ. ಸುಂದರ ಗೋಡೆಗಾಗಿ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಪ್ರಕಾರದ ರಾಸಾಯನಿಕ ಮಿಶ್ರಿತ, ಸಿಂಥೆಟಿಕ್ ಪೈಂಟ್‍ಗಳನ್ನು ಬಳಸಲಾಗುತ್ತಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ವ್ಯಕ್ತಿಯೊಬ್ಬರು ಈ ರಾಸಾಯನಿಕ ಪೈಂಟ್‍ಗಳನ್ನು ಬಳಸದೆ ದೇಶೀ ಹಸುಗಳ ಸೆಗಣಿಯಲ್ಲೇ ಪೈಂಟ್ ನಿರ್ಮಿಸಿ ಮನೆಯ ಕೋಟೆಗಳನ್ನು ಸಿಂಗರಿಸಿದ್ದಾರೆ.

ತನ್ನ ಮನೆಯನ್ನು ಸುಂದರವಾಗಿಡಲು ಜನ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಾರೆ. ಕೋಟ್ಯಾಂತರ ರೂಪಾಯಿ ವ್ಯಯಿಸಿ ತನ್ನ ಮನೆಯನ್ನು ಇತರರಿಗಿಂತ ಭಿನ್ನವಾಗಿಡಲೂ ಪ್ರಯತ್ನಿಸುತ್ತಾರೆ. ಮನೆ ಅತ್ಯಂತ ಆಕರ್ಷಕವಾಗಿ ಕಾಣಲು ಅದಕ್ಕೆ ಬಳಿದಿರುವ ಬಣ್ಣಗಳೂ ಕಾರಣವಾಗುತ್ತದೆ. ಇದೇ ಕಾರಣಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಪ್ರಕಾರದ ಕೆಮಿಕಲ್ ಹಾಗೂ ಸಿಂಥೆಟಿಕ್ ಪೈಂಟ್‍ಗಳನ್ನು ಗೋಡೆಗಳಿಗೆ ಹಚ್ಚಲು ಬಳಸಿಕೊಳ್ಳುತ್ತಾರೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಕುಟುಂಬವೊಂದು ಸ್ವದೇಶಿ ಗೋವಿನ ಸೆಗಣಿಯನ್ನೇ ಪೈಂಟ್ ಆಗಿ ಬಳಸಿದ್ದಾರೆ.

ಹೌದು ಸೆಗಣಿಗೆ ಕೆಲವು ಔಷಧೀಯ ಗಿಡಮೂಲಿಕೆಗಳನ್ನು ಬಳಸಿ ಸಿಂಥೆಟಿಕ್ ಪೈಂಟ್ ನಂತೆ ಗೋಡೆಗೆ ಅಂಟಿಕೊಳ್ಳುವಂತೆ ತಯಾರಿಸಿ ಮನೆಯ ಎಲ್ಲಾ ಕೋಣೆಗಳಿಗೂ ಬಳಿಯಲಾಗಿದೆ. ಇರ್ದೆಯ ಆಯುರ್ವೇದ ವೈದ್ಯರಾದ ಡಾ. ಶಶಿಶೇಖರ್ ಭಟ್ ಸೆಗಣಿಯನ್ನು ಬಳಸಿ ಈ ರೀತಿಯ ಹೊಸ ಪ್ರಯೋಗವನ್ನು ಮಾಡಿದ್ದು, ಸೆಗಣಿಯ ಈ ಪೈಂಟನ್ನು ವಿವಿಧ ಬಣ್ಣದಲ್ಲೂ ಸಿದ್ಧಪಡಿಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.

ರಾಸಾಯನಿಕ ಮಿಶ್ರಿತ ಸಿಂಥೆಟಿಕ್ ಪೈಂಟ್‍ಗಳಂತೆಯೇ ಸೆಗಣಿಯ ಪೈಂಟ್ ಅನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಎಲ್ಲಾ ಪೈಂಟ್‍ಗಳನ್ನು ಗೋಡೆಗೆ ಎರಡು ಬಾರಿ ಬಳಿಯುವಂತೆ ಸೆಗಣಿಯ ಪೈಂಟನ್ನೂ ಎರಡು ಬಾರಿ ಬಳಿಯಬೇಕಾಗುತ್ತದೆ. ಅಲ್ಲದೆ ಈ ಪೈಂಟ್ ವಾಟರ್ ಫೆÇ್ರೀಫ್ ಕೂಡಾ ಆಗಿದೆ. ರಾಸಾಯನಿಕ ಪೈಂಟ್ ಗಳನ್ನು ಬಳಿಯುವಾಗ ಇರುವ ಕಣ್ಣುರಿತ, ತುರಿಕೆಯ ಲಕ್ಷಣಗಳು ಸೆಗಣಿಯಿಂದ ತಯಾರಿಸಿದ ಪೈಂಟ್ ನಲ್ಲಿ ಇಲ್ಲದ ಕಾರಣ ಪೈಂಟರ್ ಗಳೂ ಇಂಥ ಪೈಂಟ್ ಗಳು ಹೆಚ್ಚೆಚ್ಚು ಮಾರುಕಟ್ಟೆಗೆ ಬರಬೇಕು ಎನ್ನುವ ಇಚ್ಛೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.

 

ಕೇವಲ ಸ್ವದೇಶೀ ತಳಿಯ ಗೋವಿನ ಸೆಗಣಿಯಿಂದ ಮಾತ್ರವೇ ಈ ಸೆಗಣಿ ಪೈಂಟ್ ತಯಾರಿಸಲು ಸಾಧ್ಯ. ಸೆಗಣಿಯನ್ನು ಕೇವಲ ಗೋಬರ್ ಗ್ಯಾಸ್ ಹಾಗೂ ಗೊಬ್ಬರಕ್ಕೆ ಬಳಸುತ್ತಿದ್ದ ಕಾಲ ಇನ್ನು ದೂರವಾಗಲಿದ್ದು, ಸೆಗಣಿಯ ಪೈಂಟ್ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಯೂ ಹೆಚ್ಚಾಗಿದೆ.

Related posts

Leave a Reply