Header Ads
Breaking News

ದೈವರಾಜ ಶ್ರೀ ಬಬ್ಬುಸ್ವಾಮಿಯ ಐತಿಹಾಸಿಕ ಸ್ಥಳಗಳು : ಮಂಗಳೂರಿನ ಪತ್ರಿಕಾಭವನದಲ್ಲಿ ಪುಸ್ತಕ ಬಿಡುಗಡೆ

ಸುರತ್ಕಲ್‍ನ ಶ್ರೀ ಬಬ್ಬುಸ್ವಾಮಿ ಅಧ್ಯಯನ ಕೇಂದ್ರ ಪ್ರಕಾಶನದ, ಯುವ ಸಾಹಿತಿ ನವೀನ್ ಸುವರ್ಣ ಪಡ್ರೆ ಅವರ 8ನೇ ಕೃತಿ ದೈವರಾಜ ಶ್ರೀ ಬಬ್ಬುಸ್ವಾಮಿಯ ಐತಿಹಾಸಿಕ ಸ್ಥಳಗಳು ಎಂಬ ಕೃತಿಯನ್ನು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ್ ಕತ್ತಲ್‍ಸಾರ್ ಬಿಡುಗಡೆಗೊಳಿಸಿದರು.

ಮಂಗಳೂರಿನ ಪತ್ರಿಕಾಭವನದಲ್ಲಿ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಈ ಸಂದರ್ಭ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್‍ಸಾರ್ ಅವರು, ತುಳುನಾಡಿನ ಕಾರಣಿಕದ ದೈವರಾದ ಶ್ರೀ ಬಬ್ಬುಸ್ವಾಮಿ ದೈವದ ಐತಿಹಾಸಿಕ ಸ್ಥಳ ಹಾಗೂ ಕುರುಹುಗಳ ವರ್ಣರಂಜಿತ ಚಿತ್ರ ಹಾಗೂಈ ಸಮಗ್ರ ಮಾಹಿತಿಯನ್ನು ಹೊಂದಿರುವ ಕೃತಿ ಇದಾಗಿದ್ದು, ಕೋಡ್ದಬ್ಬು ದೈವದ ಪಾಡ್ದನವನ್ನು ಮೂಲ ಆಧಾರವನ್ನಾಗಿ ಹಿಡಿದುಕೊಂಡು, ಬಡಗು ಬಾರ್ಕೂರಿನಿಂದ ತೆಂಕು ನಿಲೇಶ್ವರದವರೆಗೆ ಕ್ಷೇತ್ರ ಕಾರ್ಯವನ್ನು ನಡೆಸಿ ಈ ಅಮೂಲ್ಯವಾದ ಕೃತಿಯನ್ನು ಪ್ರಕಟಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಸೀತರಾಮ್ ಸಾಲ್ಯಾನ್, ಹರೀಶ್ ಜೆ ಕೊಲೆಕ್ಕಾಡಿ, ಗುರಿಕಾರರಾದ ಹೊನ್ನಯ್ಯ, ಸಾಹಿತಿ ನವೀನ್ ಸುವರ್ಣ ಪಡ್ರೆ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *