Header Ads
Header Ads
Breaking News

ದೈವಸ್ಥಾನದ ಆವರಣ ಗೋಡೆ ಕುಸಿದು ವಿದ್ಯಾರ್ಥಿನಿ ಸಾವು

ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಬೈಂದೂರು ತಾಲೂಕಿನ ಹೇರೂರು ಗ್ರಾಮಪಂಚಾಯತ್ ವ್ಯಾಪ್ತಿಯ ಉಳ್ಳೂರು ಜಟ್ಟಿಗೇಶ್ವರ ದೈವಸ್ಥಾನದ ಆವರಣ ಗೋಡೆ ಕುಸಿದು ಪ್ರತಿಭಾನ್ವಿತ ವಿದ್ಯಾರ್ಥಿನಿಯೋರ್ವಳು ಉಸಿರುಗಟ್ಟಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ.

ಉಳ್ಳೂರು ನಿವಾಸಿ ಚಂದ್ರಶೇಖರ ಶೆಟ್ಟಿ ಹಾಗೂ ಹೇಮಾ ದಂಪತಿಯ ಮೂರನೆ ಪುತ್ರಿ ಧನ್ಯ ಸಾವನ್ನಪ್ಪಿದ ದುರ್ದೈವಿ. ಮಂಗಳೂರಿನ ಮಾಂಗಳ ಗಂಗೋತ್ರಿಯಲ್ಲಿ ಎಮ್‌ಎಸ್ಸಿ ವಿದ್ಯಾಭ್ಯಾಸ ನಡೆಸುತ್ತಿದ್ದ ಧನ್ಯ ಪ್ರಥಮ ವರ್ಷದ ಪರೀಕ್ಷೆ ಬರೆದು ರಜೆಗಾಗಿ ಮನೆಗೆ ಮರಳಿದ್ದಳು. ಮನೆ ಸಮೀಪದಲ್ಲಿರುವ ಜಟ್ಟಿಗೇಶ್ವರ ದೇವಸ್ಥಾನಕ್ಕೆ ದಿನ ಬೆಳಗ್ಗೆ ಹೋಗುವ ವಿದ್ಯಾರ್ಥಿನಿ ಧನ್ಯ ಇಂದೂ ಕೈ ಮುಗಿಯಲು ಹೋಗುವಾಗ ಈ ದುರಂತ ಸಂಭವಿಸಿದೆ.

ಮಳೆ ಜೋರಾಗಿರುವ ಕಾರಣ ಮನೆಯವರು ಹೋಗುವುದು ಬೇಡ. ಇಲ್ಲೇ ನಿಂತು ಕೈ ಮುಗಿ ಎಂದರೂ ನಗುತ್ತಲೇ ಮನೆಯಿಂದ ಹೊರಟ ಧನ್ಯ ಶವವಾಗಿ ವಾಪಾಸಾಗಿದ್ದಾಳೆ. ಚಂದ್ರಶೇಖರ ಶೆಟ್ಟಿಯವರ ಮೂವರು ಹೆಣ್ಣುಮಕ್ಕಳಲ್ಲಿ ಧನ್ಯ ಕೊನೆಯವಳು ಧನ್ಯ. ಸ್ಥಳಕ್ಕೆ ಬೈಂದೂರು ಪೊಲೀಸರು ಹಾಗೂ ತಹಶೀಲ್ದಾರ್ ಭೇಟಿ ನೀಡಿದ್ದಾರೆ.

Related posts

Leave a Reply