Header Ads
Breaking News

ದೈವಸ್ಥಾನವೊಂದರ ಕಾಣಿಕೆ ಡಬ್ಬಿ ಕಳವು : ವಿಟ್ಲ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ: ದೈವಸ್ಥಾನವೊಂದರ ಕಾಣಿಕೆ ಡಬ್ಬಿ ಕಳವು ಮಾಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯ ಲ್ಲಿ ದೂರು ದಾಖಲಾಗಿದೆ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವೀರಕಂಬ ಗ್ರಾಮದ ಕೆಲಿಂಜ ಉಳ್ಳಾಲ್ತಿ ದೇವಸ್ಥಾನದ ತಾಮ್ರದ ಕಾಣಿಕೆ ಡಬ್ಬಿ ಕಳವು ಅಗಿರುವ ಬಗ್ಗೆ ದೇವಸ್ಥಾನದ ಆಡಳಿತ ಮೋಕ್ತೇಸರ ಪುಂಡಿಕಾಯಿ ಶಂಕರನಾರಾಯಣ ಭಟ್ ಠಾಣೆಗೆ ದೂರು ನೀಡಿದ್ದಾರೆ.

ಫೆ.15 ಕಳವು ನಡೆದಿದ್ದ ಫೆ.19 ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ವ್ಯಕ್ತಿಯೋರ್ವ ಕಾಣಿಕೆ ಡಬ್ಬಿ ಕಳವು ಮಾಡುವ ದೃಶ್ಯ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದ್ದು ಅದು ಈಗ ವೈರಲ್ ಆಗಿದೆ. ಫೆಬ್ರವರಿ 14 ರಂದು ಇಲ್ಲಿನ ವಾರ್ಷಿಕ ಜಾತ್ರೆ ನಡೆದಿದ್ದು, ಬಳಿಕ ಮರುದಿನ ದೇವಸ್ಥಾನದ ಲ್ಲಿ ಸ್ವಚ್ಚತಾ ಕಾರ್ಯಗಳು ನಡೆಯುತ್ತಿತ್ತು.ಇದೇ ಸಂದರ್ಭದಲ್ಲಿ ವ್ಯಕ್ತಿಯೋರ್ವ ಗೋಣಿಚೀಲ ಕೈಯಲ್ಲಿ ಹಿಡಿದು ಬರುವುದು ಬಳಿಕ ಆತ ದೇವಸ್ಥಾನದ ಮೆಟ್ಟಲಿಗೆ ಕೈ ಮುಗಿಯುವ ನಾಟಕ ವಾಡಿ ಅಡ್ಡ ಬೀಳುತ್ತಾನೆ. ಅದೇ ಹೊತ್ತಿಗೆ ಅಲ್ಲಿ ಇನ್ನೋರ್ವ ವ್ಯಕ್ತಿ ಇರುವುದನ್ನು ಗಮನಿಸಿ ಅ ವ್ಯಕ್ತಿ ಸುಮಾರು ಹೊತ್ತು ಅಡ್ಡ ಬಿದ್ದು ಇರುತ್ತಾನೆ. ಅತ ಅಲ್ಲಿಂದ ಹೋಗಿದ್ದಾನೆ ಎಂದು ಗೊತ್ತಾದಾಗ ಎದ್ದು ಮೆಟ್ಟಿಲಿನಲ್ಲಿದ್ದ ಕಾಣಿಕೆ ಡಬ್ಬಿಯನ್ನು ಗೋಣಿ ಚೀಲದಲ್ಲಿ ತುಂಬಿಸಿ ಅಲ್ಲಿಂದ ಕಾಲ್ಕಿತ್ತುವ ದೃಶ್ಯ ಸಿಸಿ.ಟಿ.ವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ವಿಟ್ಲ ಠಾಣಾ ಎಸ್. ಐ.ವಿನೋದ್ ಹಾಗೂ ಸಿಬ್ಬಂದಿ ಗಳು ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *