Header Ads
Header Ads
Breaking News

ದೈವಾರಾಧನೆಯನ್ನು ಕೀಳುಮಟ್ಟಕ್ಕೆ ಇಳಿಸುವ ಪ್ರಯತ್ನ ಸೂಕ್ತವಲ್ಲ:ಅಭಯಚಂದ್ರ ಜೈನ್ ಅಭಿಪ್ರಾಯ

ತುಳುನಾಡ ದೈವರಾದನಾ ರಕ್ಷಣಾ ಚಾವಡಿ ಮೂಡುಬಿದಿರೆ ವಲಯದ ಆಶ್ರಯದಲ್ಲಿ ದೈವಗಳ ಅಣಕು ಪ್ರದರ್ಶನ ವಿರುದ್ಧ ಖಂಡನಾ ಸಭೆ ಮತ್ತು ದೈವಾರಾಧಕರ ಜನಜಾಗೃತಿ ಸಮಾವೇಶವು ಸಮಾಜ ಮಂದಿರದಲ್ಲಿ ನಡೆಯಿತು.ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸ್ವಾತಂತ್ರ್ಯ ದೊರಕಿದ ಫಲವಾಗಿ ಎಲ್ಲ ವರ್ಗದ ಜನರಲ್ಲಿ ಬದಲಾವಣೆ ಉಂಟಾಗಿದೆ, ಈ ಬದಲಾವಣೆ ಶಿಕ್ಷಣ ಪಡೆಯುವಲ್ಲಿ ಅನುಕೂಲಕರವಾಗಿದ್ದು ಇದರಿಂದಾಗಿ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಹೇಳಿದರು.

ತುಳುನಾಡ ದೈವಾರಾಧನಾ ರಕ್ಷಣಾ ಚಾವಡಿ ಜಿಲ್ಲಾಧ್ಯಕ್ಷ ದೇವರಾಜ್.ಡಿ. ಬಾಳ ಅಧ್ಯಕ್ಷತೆ ವಹಿಸಿದ್ದರು. ಕೇಮಾರು ಸಾಂದೀಪನೀ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ದೈವ ದೇವರುಗಳ ಮೇಲಿರುವ ಶ್ರದ್ಧಾ ಭಕ್ತಿಗೆ ಭಂಗ ತರುವುದು ಉಚಿತವಲ್ಲ, ದೈವ ದೇವರುಗಳ ವಿಚಾರದಲ್ಲಿ ಅಕ್ರಮದ ಮನೋಭೂಮಿಕೆಯನ್ನು ಇರಿಸಿಕೊಳ್ಳುವುದು ಸೂಕ್ತವಲ್ಲ ಎಂದರು.ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ, ಮಾರೂರು ಖಂಡಿಗದ ರಾಮದಾಸ ಆಸ್ರಣ್ಣ , ಮಂಗಳೂರು ಸಂಸ್ಕಾರ ಭಾರತೀಯ ದಯಾನಂದ ಕತ್ತಲ್ ಸಾಲ್, ಪುತ್ತೂರು ದೈವರಾಧಕರ ಸಂಘದ ಅಧ್ಯಕ್ಷ ಡಾ. ನಿರಂಜನ ರೈ, ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಉಪಸ್ಥಿತರಿದ್ದರು.

Related posts

Leave a Reply