Header Ads
Header Ads
Breaking News

ದೈವ ದೇವರುಗಳ ಆಶೀರ್ವಾದದಿಂದ ಕಲಾಕ್ಷೇತ್ರದಲ್ಲಿ ಬೆಳೆಯಲು ಸಾಧ್ಯ. ತುಳು ರಂಗಭೂಮಿ ಕಲಾವಿದ ಅರವಿಂದ ಬೋಳಾರ್ ಅಭಿಪ್ರಾಯ. ಉಲ್ಲಂಜೆಯಲ್ಲಿ ನಡೆದ ಕಾರ್ಯಕ್ರಮ.

ತುಳುನಾಡಿನ ದೈವ ದೇವರುಗಳ ಆಶೀರ್ವಾದದಿಂದ ನಾವು ಕಲಾಕ್ಷೇತ್ರದಲ್ಲಿ ಈ ಮಟ್ಟಕ್ಕೆ ಬೆಳೆಯಲು ಸಾದ್ಯವಾಯಿತು ಎಂದು ತುಳು ರಂಗಭೂಮಿ ಮತ್ತು ಸಿನಿಮಾ ಕಲಾವಿದ ಅರವಿಂದ ಬೋಳಾರ್ ಹೇಳಿದರು.ಅವರು ಉಲ್ಲಂಜೆಯ ಶ್ರೀ ಮಂತ್ರದೇವತೆ ಕೊರಗಜ್ಜ ಚಾಮುಂಡೇಶ್ವರೀ ಗುಳಿಗ ಸನಿಧಿಯಲ್ಲಿ ನೇಮೋತ್ಸವದ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿ ಕರಾವಳಿಯಲ್ಲಿ ನೆಲೆ ನಿಂತಿರುವ ಅನೇಕ ದೈವ ದೇವರುಗಳು ಅತ್ಯಂತ ಕಾರಣಿಕದಿಂದ ಕೋಡಿದೆ, ಅದರಲ್ಲಿ ಈ ಕ್ಷೇತ್ರವೂ ಹೊರತಾಗಿಲ್ಲ ಎಂದರು, ನಟ ಭೋಜರಾಜ ವಾಮಂಜೂರು ಮಾತನಾಡಿ ತುಳುನಾಡಿನ ಅಭಿಮಾನಿಗಳು ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ, ಗ್ರಾಮೀಣ ಪ್ರದೇಶದಲ್ಲಿ ಈ ಕ್ಷೇತ್ರ ಭಕ್ತರ ಸಮಸ್ಯೆಗಳನ್ನು ನಿವಾರಿಸುತ್ತಿದೆ ಕ್ಷೇತ್ರ ಇನ್ನಷ್ಟು ಬೆಳೆಯಲಿ ಎಂದರು.

ಈ ಸಂದರ್ಭ ನಟ ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸತೀಶ್ ಬಂದಲೆ ಧರ್ಮದರ್ಶಿ ಹರೀಶ್ ಪೂಜಾರಿ, ವಸಂತ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡೆತ್ತೂರು ದೇವಸ್ಯಮಠದ ವೇದವ್ಯಾಸ ಉಡುಪ ಜಯರಾಮ ಮುಕಾಲ್ದಿ ಕೊಡೆತ್ತೂರು, ನಿರ್ದೇಶಕ ಎ.ಎಸ್ ಪ್ರಶಾಂತ್, ನಿರ್ಮಾಪಕ ಸಂತೋಷ್ ಶೆಟ್ಟಿ, ನಟ ವಿಘ್ನೇಶ್ , ಅಪ್ಪಿ ಪೂಜಾರ್ತಿ, ವಿಠಲ ಪೂಜಾರಿ, ದೀಪಕ್, ಸದಾಶಿವ ಶೆಟ್ಟಿ ಮುಂಡಾಜೆ, ರೋಹಿತ್ ಶೆಟ್ಟಿ, ಚೇತನ್ ಕುಮಾರ್ ಶೆಟ್ಟಿ, ಯಶೋಧರ ಶೆಟ್ಟಿ, ನಿತಿನ್, ತಾರನಾಥ್, ಸೀತಾರಾಮ, ರೋಹಿತ್, ಸುಧೀರ್, ಸತೀಶ್, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply