Breaking News

ದೊಡ್ಡ ಸವಾಲಿನ ಭೇಟಿ,  ಇಸ್ರೇಲಿನಲ್ಲಿ ಪ್ರಧಾನಿ ಭೇಟಿ

ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಗೃಹ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈಗಾಗಲೇ ಇಸ್ರೇಲ್ಗೆ ಭೇಟಿ ನೀಡಿದ್ದಾರೆ. ಪ್ರಣವ್ ಮತ್ತು ಸುಷ್ಮಾ ಅವರು ಇಸ್ರೇಲ್ಗೆ ಭೇಟಿ ನೀಡಿದ್ದಾಗಲೇ ಪ್ಯಾಲೆಸ್ಟೀನ್ಗೂ ಭೇಟಿ ಕೊಟ್ಟಿದ್ದರು. ಆದರೆ ರಾಜನಾಥ್ ಪ್ಯಾಲೆಸ್ಟೀನ್ಗೆ ಹೋಗಿರಲಿಲ್ಲ. ಕಾಂಗ್ರೆಸ್ ಆಡಳಿತವಿದ್ದಾಗಲೂ ದ್ವಿಪಕ್ಷೀಯ ಭೇಟಿಗಳು ನಡೆದಿವೆ. ಆದರೆ ಇಸ್ರೇಲ್ಗೆ ಭೇಟಿ ನೀಡಿದ ಭಾರತದ ಹಿರಿಯ ರಾಜಕಾರಣಿ ಎಲ್. ಕೆ. ಅಡ್ವಾಣಿ. ೨೦೦೦ದಲ್ಲಿ ಅವರು ಭೇಟಿ ನೀಡಿದ್ದರು.
ಇಸ್ರೇಲ್ಗೆ ಭೇಟಿ ನೀಡಿದ್ದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಂಗಿದ್ದ ಕಿಂಗ್ ಡೇವಿಡ್ ಹೋಟೆಲ್ನಲ್ಲಿ ಮೋದಿ ತಂಗಿದ್ದಾರೆ
ಟ್ರಂಪ್ ತಂಗಿದ್ದಾಗ ಅಧ್ಯಕ್ಷರ ಜತೆಗಿದ್ದವರನ್ನು ಬಿಟ್ಟು ಬೇರೆ ಯಾರಿಗೂ?ಪ್ರವೇಶ ಇರಲಿಲ್ಲ. ಮೋದಿ ಅವರು ತಂಗಿರುವ ಅಂತಸ್ತು ಮತ್ತು ಅದರ ಮೇಲಿನ ಅಂತಸ್ತುಗಳನ್ನು ತೆರವುಗೊಳಿಸಲಾಗಿದೆ. ಹೋಟೆಲ್ನ ಕಾರು ಪಾರ್ಕಿಂಗ್ ಅನ್ನು ಕೂಡ ತೆರವು ಮಾಡಲಾಗಿದೆ.
೨೦೦೩ರಲ್ಲಿ ಇಸ್ರೇಲ್ ಪ್ರಧಾನಿ ಏರಿಯಲ್ ಶೆರೋನ್ ಭಾರತಕ್ಕೆ ಭೇಟಿ ನೀಡಿದರು. ಇದು ಇಸ್ರೇಲ್ ಪ್ರಧಾನಿಯೊಬ್ಬರು ಭಾರತಕ್ಕೆ ನೀಡಿದ ಮೊದಲ ಭೇಟಿ. ದ್ವಿಪಕ್ಷೀಯ ಸಹಕಾರದ ಹಲವು ಒಪ್ಪಂದಗಳಿಗೆ ಆಗ ಸಹಿ ಹಾಕಲಾಯಿತು.
ಯೆಹೂದಿ ಸಮುದಾಯದ ಬಗ್ಗೆ ಮಹಾತ್ಮ ಗಾಂಧಿ ಅವರು ಸಹಾನುಭೂತಿ ಹೊಂದಿದ್ದರು. ಆದರೆ ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ನಡುವೆ ಅರಬರು ನೆಲೆಯಾಗಿದ್ದ ಪ್ರದೇಶದಲ್ಲಿ ಯೆಹೂದಿಯರು ಬಲವಂತದಿಂದ ತಂಗಿದ್ದನ್ನು ಗಾಂಧಿ ವಿರೋಧಿಸಿದ್ದರು. ಸ್ವಾತಂತ್ರ್ಯಾನಂತರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮಹಾತ್ಮ ಗಾಂಧಿಯ ನಿಲುವನ್ನೇ ಮುಂದುವರಿಸಿದರು. ಪ್ಯಾಲೆಸ್ಟೀನ್ ದೇಶವನ್ನು ವಿಭಜಿಸಿ ಪ್ರತ್ಯೇಕ ಯೆಹೂದಿ ದೇಶ ರಚಿಸುವ ಪ್ರಸ್ತಾವ ೧೯೪೭ರಲ್ಲಿ ವಿಶ್ವಸಂಸ್ಥೆಯ ಮುಂದೆ ಇತ್ತು. ಈ ಪ್ರಸ್ತಾವದ ಪರವಾಗಿ ಮತ ಹಾಕಬೇಕು ಎಂದು ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಅವರು ನೆಹರೂ ಅವರನ್ನು ಕೋರಿದ್ದರು. ಅದನ್ನು ನೆಹರೂ ನಿರಾಕರಿಸಿದ್ದರು. ೧೯೪೭ರ ನವೆಂಬರ್ ೨೯ರಂದು ಪ್ರಸ್ತಾವದ ವಿರುದ್ಧ ಭಾರತ ಮತ ಚಲಾಯಿಸಿತು. ಆದರೆ ೧೯೪೮ರ ಮೇ ೧೪ರಂದು ಇಸ್ರೇಲ್ ಸ್ವತಂತ್ರ ದೇಶವಾಗಿ ಅಸ್ತಿತ್ವಕ್ಕೆ ಬಂತು.
ಇಸ್ರೇಲ್ ಎಸಗಿದೆ ಎಂದು ಹೇಳಲಾಗುವ ಯುದ್ಧಾಪರಾಧಗಳ ಬಗ್ಗೆ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ತನಿಖೆ ನಡೆಯಬೇಕು ಎಂಬ ನಿರ್ಣಯವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಮತಕ್ಕೆ ಹಾಕಿದಾಗ ಭಾರತ ತಟಸ್ಥ ಧೋರಣೆ ಅನುಸರಿಸಿತು. ಇಸ್ರೇಲ್ ಒಂದು ಅತಿಕ್ರಮಣಕಾರಿ ದೇಶ ಎಂಬ ಹೆಸರನ್ನೇ ಜಾಗತಿಕವಾಗಿ ಹೊಂದಿದೆ. ಅದೇ?ಹೊತ್ತಿಗೆ ಪ್ಯಾಲೆಸ್ಟೀನನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ದೇಶ ಎಂದು ಪರಿಗಣಿಸಲಾಗುತ್ತಿದೆ. ಮೋದಿ ಭೇಟಿ ವೇಳೆ ಎರಡೂ ದೇಶಗಳ ಜತೆಗಿನ ಸಂಬಂಧದ ಸಮತೋಲನ ಕಾಯ್ದುಕೊಳ್ಳುವುದು ದೊಡ್ಡ ಸವಾಲು.

Related posts

Leave a Reply