Header Ads
Header Ads
Breaking News

ದೋಸೆಯಿಂದಲೇ ಹೆಚ್ಚುವರಿ ಎರಡು ಕೋಟಿ ತೆರಿಗೆ ಸಂಗ್ರಹ, ಕೇಂದ್ರ ಮಂತ್ರಿ ಪೀಯೂಶ್ ಗೋಯಲ್

ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದಾಗಿ ದೋಸೆಯಿಂದಲೇ ವರ್ಷಕ್ಕೆ ರೂ. ೨ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ ಎಂದು ಕೇಂದ್ರ ಇಂಧನ ಸಚಿವ ಪೀಯೂಷ್ ಗೋಯಲ್ ಹೇಳಿದರು.
ಜಿ‌ಎಸ್ಟಿ ಅವಲೋಕನ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೋಸೆ ತಿಂದರೆ ಎರಡು ಮೂರು ರೂಪಾಯಿ ಜಾಸ್ತಿಯಾಗುತ್ತದೆ ಎಂದು ನೀವು ಭಾವಿಸುತ್ತೀರಿ. ಕೇವಲ ದೋಸೆಯ ಮೇಲಿನ ತೆರಿಗೆಯಿಂದ ದೊಡ್ಡ ಮೊತ್ತದ ಹಣ ಸಂಗ್ರಹವಾಗಲಿದೆ ಎಂದು ಹೇಳಿದರು. ಉಳ್ಳವರು ಮತ್ತು ಬಡವರ ನಡುವಣ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ. ಸಂಪತ್ತಿನ ಕಾರಣಕ್ಕೆ ಭಾರತ ಹೋಳಾಗಬಾರದು. ಎಲ್ಲರಿಗೂ ಸಂಪತ್ತಿನ ಹಂಚಿಕೆಯಾಗಿ ಜೀವನ ಮಟ್ಟ ಸುಧಾರಿಸಬೇಕು ಎಂಬುದೇ ಸರ್ಕಾರದ ಉದ್ದೇಶ. ತೆರಿಗೆ ಹಣದಿಂದ ಬಡವರು ಮತ್ತು ಆದಿವಾಸಿಗಳ ಶಿಕ್ಷಣ, ಆರೋಗ್ಯ, ವಿದ್ಯುತ್, ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯತೆ ನೀಡುವುದಾಗಿ ಹೇಳಿದರು.
ನಾನೂ ಕೂಡ ವ್ಯಾಪಾರಿ ಕುಟುಂಬದಿಂದಲೇ ಬಂದವನು. ವ್ಯಾಪಾರಿಗಳು ಹೇಗೆ ನಡೆದುಕೊಳ್ಳುತ್ತಿದ್ದರು ಎಂಬುದೂ ಗೊತ್ತು. ಎರಡೆರಡು ಲೆಕ್ಕ ಇಡುತ್ತಿದ್ದರು. ಗ್ರಾಹಕರು ಬಿಲ್ ಕೇಳಿದರೆ ತೆರಿಗೆ ಪಾವತಿಸಬೇಕಾಗುತ್ತದೆ ಎನ್ನುತ್ತಿದ್ದರು. ಜನರು ಸ್ವಲ್ಪ ಹಣ ಉಳಿಸಲು ಬಿಲ್ ಪಡೆಯದೇ ವಸ್ತುಗಳನ್ನು ಖರೀದಿಸುತ್ತಿದ್ದರು. ಇಂದಿನ ವ್ಯಾಪಾರಿ ಸಮುದಾಯಗಳ ಯುವಕರು ಈ ರೀತಿ ವ್ಯಾಪಾರ ವ್ಯವಹಾರ ನಡೆಸಲು ಬಯಸುವುದಿಲ್ಲ. ಪಾರದರ್ಶಕ ವ್ಯವಹಾರ ನಡೆಸಲು ಬಯಸುತ್ತಾರೆ ಎಂದರು.

Related posts

Leave a Reply