Header Ads
Header Ads
Breaking News

ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಢಿಕ್ಕಿ. ಅಪಘಾತಕ್ಕೆ ವಿದ್ಯಾರ್ಥಿ ಮೃತ್ಯು. ಕಿನ್ನಿಗೋಳಿಯ ಮೂರು ಕಾವೇರಿ ಎಂಬಲ್ಲಿ ಘಟನೆ.

ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಮೂರು ಕಾವೇರಿಯಲ್ಲಿ ನಡೆದಿದೆ. ಸಾವನ್ನಪ್ಪಿದವರನ್ನು ಪಾಂಪೈ ಕಾಲೇಜಿನ ಅಂತಿಮ ವರ್ಷದ ಬಿ.ಬಿ.ಎಂ ವಿದ್ಯಾರ್ಥಿ ವರ್ಷಿತ್ (20) ವರ್ಷ ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ವರ್ಷಿತ್ ತನ್ನ ಸಹಪಾಠಿ ಡೇರಿಕ್ ಡೆಲ್ಸನ್ ಡಿಸೋಜ ಅವರ ದ್ವಿಚಕ್ರ ವಾಹನದಲ್ಲಿ ಕಾಲೇಜಿನಿಂದ ಮೂರು ಕಾವೇರಿ ಕಡೆಗೆ ಸಂಚರಿಸುವಾಗ ಮೂರು ಕಾವೇರಿ ಸಮೀಪ ಮುಂಭಾಗದಿಂದ ಟಿಪ್ಪರ್ ಬಂದಿದ್ದು ಕೂಡಲೇ ರಸ್ತೆಯ ಎಡ ಬದಿಗೆ ಬಂದಿದ್ದಾರೆ ಕೋಡಲೇ ದ್ವಿಚಕ್ರ ವಾಹನ ರಸ್ತೆಯ ಅಂಚಿಗೆ ಸಿಲುಕಿ ಟಿಪ್ಪರ್ ಮುಂಭಾಗ ರಸ್ತೆಗೆ ಬಿದ್ದಿದೆ, ಟಿಪ್ಪರ್ ಡಿಕ್ಕಿಯ ರಭಸಕ್ಕೆ ವರ್ಷಿತ್ ತೀವ್ರ ತರದ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವರ್ಷಿತ್ ಹಿಂಬದಿ ಸವಾರರಾಗಿದ್ದು ಹೆಲ್ಮೆಟ್ ಧರಿಸದ ಕಾರಣ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸುರತ್ಕಲ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply