Header Ads
Header Ads
Breaking News

ದ್ವಿಚಕ್ರ ವಾಹನದ ಹೈಬ್ರೀಮ್ ಲೈಟ್‌ನಿಂದ ವಾಹನ ಸವಾರರಿಗೆ ತೊಂದರೆ:ಪೊಲೀಸ್ ಫೋನ್ ಇನ್ ನಲ್ಲಿ ದೂರು

ದ್ವಿಚಕ್ರ ವಾಹನದ ಹೈಬ್ರೀಮ್ ಲೈಟ್‌ನಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಈ ಕುರಿತು ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್ ಇನ್ ಫೋನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಆಗ್ರಹಿಸಿದ್ರು. ನಗರದ ಪೊಲೀಸ್ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರಿದ್ರು. ಈ ಬಗ್ಗೆ ತಪಾಸಣೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್ ಹೇಳಿದ್ರು.

ನಗರದ ಕಾವೂರು ಜಂಕ್ಷನ್‌ನಲ್ಲಿ ಕಳೆದ 4-5 ದಿಗಳಿಂದ ಅಪಘಾತವಾಗುತ್ತಿದೆ . ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಕಮೀಷನರಿಗೆ ಫೋನ್ ಇನ್ ಕಾರ್ಯಕ್ರಮದಲ್ಲಿ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿ ಪೊಲೀಸ್ ಕಮೀಷನರ್, ಈ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು ಅಂತಾ ಹೇಳಿದ್ರು. ಈ ವೇಳೆ ಡಿಸಿಪಿ ಹನುಮಂತರಾಯ, ಸೇರಿದಂತೆ ಇನ್ನಿತರ ಹಿರಿಯ ಪೊಲೀಸರು ಉಪಸ್ಥಿತರಿದ್ದರು.

Related posts

Leave a Reply