Breaking News

ದ್ವಿತೀಯ ಪಿಯುಸಿಯಲ್ಲಿ ಹೊಸ ಕ್ರಾಂತಿ, ಎಕ್ಸ್‌ಪರ್ಟ್ ಕಾಲೇಜಿನ ಟಾಪರ್ ವಿದ್ಯಾರ್ಥಿಗಳಿಗೆ ಸನ್ಮಾನ


ಈ ಬಾರಿ ರಾಜ್ಯದಲ್ಲಿ ಟಾಪರ್ ಆಗಿರುವ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಸೃಜನಾ ಎನ್. ಅನ್ನಪೂರ್ಣ ಪಿ,, ಶ್ರೇಷ್ಠಾ ಎಸ್. ಹೆಚ್., ವಿಶಾಲ್ ಕಿಶೋರ್ ಇವರನ್ನು ಕಾಲೇಜಿನ ಪರವಾಗಿ ಅವರ ಹೆತ್ತವರನ್ನು ಕಾಲೇಜಿನ ಇತರ ವಿದ್ಯಾರ್ಥಿಗಳ ಹಾಗೂ ಮಾಧ್ಯಮ ಮಿತ್ರರ ಸಮ್ಮುಖದಲಿ ಸನ್ಮಾನಿಸಲಾಯಿತು.
ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಸೃಜನಾ ಎನ್. ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಪರೀಕ್ಷೆ ಬರೆದ ಕೊಡಿಯಾಲ್ ಬೈಲ್ ಮತ್ತು ವಳಚ್ಚಿಲ್‌ನ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಶೇ. ೯೯.೧೮ರಶ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಪದವಿ ಪೂರ್ವ ಶಿಕ್ಷಣದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದ್ದಾರೆ ಅವರನ್ನು ಸನ್ಮಾನಿಸುವ ಕೆಲಸ ನಡೆಯಿತು.

Related posts

Leave a Reply