Header Ads
Breaking News

ದ.ಕ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ನಿಶ್ಚಿತ: ಮಾಜಿ ಡಿಸಿಎಂ ಆರ್. ಅಶೋಕ್

ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಗೆಲುವು ನಿಶ್ಚಿತ. ಅಧಿಕ ಮತಗಳ ಅಂತರದಿಂದ ಜಯ ಸಾಧಿಸಲಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಸಹಕಾರಿ ಎಂದು ಮಂಗಳೂರಿನಲ್ಲಿ ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿದರು.
ಅವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ದೇವೇಗೌಡರು ಇದು ನನ್ನ ಕೊನೆಯ ಚುನಾವಣೆ ಅಂತಾರೆ. ಮತ್ತೆ ಕಾಂಗ್ರೆಸ್ ಹೇಳಿರೋದಕ್ಕಾಗಿ ಚುನಾವಣೆಗೆ ನಿಂತೆ ಎನ್ನುತ್ತಾರೆ. ದೇವೇಗೌಡರೂ ಯಾವತ್ತಾದರೂ ಕಾಂಗ್ರೆಸ್ ಮಾತು ಕೇಳಿದ್ದು ಇದೆಯಾ? ಎಂದು ಪ್ರಶ್ನಿಸಿದರು.

ಉಳಾಯಿಬೆಟ್ಟು ಕೋಮು ಗಲಭೆಯ ಕೇಸ್ ವಾಪಾಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಈ ಮೂಲಕ ಕಾಂಗ್ರೆಸ್ ಧರ್ಮ ರಾಜಕಾರಣ ಮಾಡುತ್ತಿದೆ ಎಂದರು.

ತೇಜಸ್ವಿ ಸೂರ್ಯ ಪರ ಪ್ರಚಾರದಲ್ಲಿ ಅಶೋಕ್ ರೈ ಗೈರು ವಿಚಾರದ ಬಗ್ಗೆ ಪ್ರತಿಕ್ರಿಯಿ ನೀಡಿದ ಅವರು, ಪ್ರಚಾರದ ಉದ್ಘಾಟನೆ ಮಾಡಿದ್ದೇ ನಾನು. ನಾವು ಕಾರ್ಯ-ವಾಚ-ಮನಸ್ಸ ಕೆಲಸ ಮಾಡುತ್ತೇವೆ. ದೊಡ್ಡ ಅಂತರದಲ್ಲಿ ತೇಜಸ್ವಿ ಸೂರ್ಯ ಗೆಲ್ಲುತ್ತಾರೆ. ಕುಟುಂಬ ರಾಜಕಾರಣ ವಿಚಾರವಾಗಿ ನಾವು ತೇಜಸ್ವಿನಿಯವರಿಗೆ ಅವಕಾಶ ನಿರಾಕರಿಸಿಲ್ಲ ಎಂದರು.

Related posts

Leave a Reply

Your email address will not be published. Required fields are marked *