Header Ads
Header Ads
Breaking News

ದ.ಕ. ಜಿಲ್ಲಾಡಳಿತದಿಂದ ಬೀಚ್‌ನಲ್ಲಿ ಸ್ವಚ್ಚತೆ

ಅರಣ್ಯ ಮತ್ತು ಪರಿಸರ ಮಂತ್ರಾಲಯ, ಹವಾಮಾನ ಬದಲಾವಣೆ ಇಲಾಖೆ ಹಾಗೂ ಕರ್ನಾಟಕ ಸರಕಾರ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ವತಿಯಿಂದ ಮಂಗಳೂರಿನ ಚಿತ್ರಾಪುರ, ಕೂಳೂರು, ಹೊಸಬೆಟ್ಟು ಕಡಲ ತೀರದಲ್ಲಿ ಸ್ವಚ್ಯತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಮೀನುಗಾರಿಕ ಇಲಾಖೆಯ ಉಪ ಆಯುಕ್ತರಾದ ಮಹೇಶ್ ಕುಮಾರ್ ಭಾಗವಹಿಸಿದರು. ನಂತರ ಮಾತನಾಡಿದ ಅವರು, ಈ ವರ್ಷ ದೇಶವು ಪರಿಸರ ದಿನಾಚರಣೆಯ ಆತೀಥ ರಾಷ್ಟ್ರವಾಗಿರುವುದರಿಂದ ಜಿಲ್ಲೆಯ11 ಸಮುದ್ರ ಕಿನಾರೆಯಲ್ಲಿ ಬೀಚ್ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಂಡಿರುತ್ತೇವೆ. ಇದರಿಂದಾಗಿ ಬೀಚ್ ಪ್ರವಾಸಿಗರಿಗೆ ಸುಂದರ ತಾಣವನ್ನಾಗಿಸುವುದೇ ನಮ್ಮ ಉದ್ದೇಶ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪರಿಸರದ ಸುತ್ತಲಿನ ಶಾಲಾ ವಿದ್ಯಾರ್ಥಿಗಳು, ಮೊಗವೀರ ಮಹಜನ ಸಂಘ, ಜಿಲ್ಲಾಡಳಿತ, ಸಿಆರ್‌ಎಫ್ ಸಂಸ್ಥೆಗಳು ಸ್ವಚ್ಚತಾ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.
 

Related posts

Leave a Reply