Header Ads
Header Ads
Header Ads
Breaking News

ದ.ಕ ಜಿಲ್ಲಾಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟ

ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ದ.ಕ ಜಿಲ್ಲಾಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟದ ಮೊದಲ ದಿನವಾದ ಶನಿವಾರ ಆಳ್ವಾಸ್‌ನ ಕ್ರೀಡಾಪಟುಗಳು ನಾಲ್ಕು ಹೊಸ ಕೂಟ ದಾಖಲೆಗಳನ್ನು ದಾಖಲಿಸಿದ್ದಾರೆ. ಅಲ್ಲದೇ ಆಳ್ವಾಸ್‌ನ ಕ್ರೀಡಾಪಟುಗಳು 15 ಚಿನ್ನ, 14 ಬೆಳ್ಳಿ, 2 ಕಂಚಿನ ಪದಕಗಳನ್ನು ಗಳಿಸುವ ಮೂಲಕ ಸಾಧನೆ ಮೆರೆದಿದ್ದಾರೆ.


ಹೈಸ್ಕೂಲ್ 14 ವರ್ಷ ವಯೋಮಿತಿಯ ಹುಡುಗರ ವಿಭಾಗದಲ್ಲಿ ಆಳ್ವಾಸ್ ಆಂಗ್ಲ ಪ್ರೌಢಶಾಲೆಯ ಮಹಮ್ಮದ್ ಮುನಾಫ್ 100 ಮೀ ಓಟವನ್ನು 11.9 ಸೆಕೆಂಡ್‌ಗಳಲ್ಲಿ ಕ್ರಮಿಸಿ, 2015ರಲ್ಲಿ ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿ ಮಹಾಂತೇಶ್ ಸಿದ್ದಪ್ಪ ಹಲವಿ ಅವರ ಹಳೆಯ ದಾಖಲೆ 12.1.0 ಹಳೆ ದಾಖಲೆಯನ್ನು ಅಳಿಸಿದ್ದಾರೆ. ಅದೇ ವಿಭಾಗದ ಶಾಟ್‌ಪುಟ್‌ನಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಶ್ರೀನಿವಾಸ್ 15.56 ಮೀಟರ್ ದೂರಕ್ಕೆ ಎಸೆದು, ಪುತ್ತೂರು ಸುಧಾನ ರೆಸಿಡೆನ್ಸಿಯಲ್ ಸ್ಕೂಲ್‌ನ ಅದಿತ್ಯ ಜೆ. ಅವರ 2016 ರ 12.25 ಮೀ. ಹಳೇಯ ದಾಖಲೆಯನ್ನು ಅಳಿಸಿದ್ದಾರೆ.


ಪ್ರೌಢಶಾಲಾ 17  ವಯೋಮಿತಿಯ ಬಾಲಕರ ವಿಭಾಗದ ಶಾಟ್‌ಪುಟ್‌ನಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನಾಗೇಂದ್ರ ಅಣ್ಣಪ್ಪ ನಾಯ್ಕ್ 14.83ಮೀ. ದೂರಕ್ಕೆ ಎಸೆದು, 2016 ರಲ್ಲಿನ ತನ್ನದೇ ಹಳೆಯ ದಾಖಲೆ 14.04  ಅಳಿಸಿದ್ದಾರೆ. ಅದೇ ವಿಭಾಗದ 400 ಮೀ. ಓಟದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ರಿನ್ಸ್ ಜೋಸೆಫ್ 49.70 ಸೆಕೆಂಡ್ಸ್‌ಗಳಲ್ಲಿ ಕ್ರಮಿಸಿ, 2015 ರಲ್ಲಿ ಮಂಗಳೂರು ಸೈಂಟ್ ಅಲೋಶಿಯಸ್ ಪ್ರೌಢಶಾಲೆಯ ರೋಹನ್ ಡಿ. ಅವರ 51.40 ಸೆಕೆಂಡ್ಸ್‌ಗಳನ್ನು ಅಳಿಸಿ ಹೊಸ ದಾಖಲೆ ಸ್ಥಾಪಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ, ಬಂಟ್ವಾಳ ಎಸ್‌ವಿಎಸ್ ದೇವಳ ಹೈಸ್ಕೂಲ್ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ನಡೆದ ಈ ಕ್ರೀಡಾಕೂಟವನ್ನು ಅಥ್ಲೆಟಿಕ್ ಕೋಚ್ ದಿನೇಶ್ ಕುಂದರ್ ಧ್ವಜಾರೋಹಣ ನಡೆಸುವ ಮೂಲಕ ಚಾಲನೆ ನೀಡಿದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಮಂಗಳೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗುರುನಾಥ್ ಬಾಗೇವಾಡಿ, ಮೂಡುಬಿದಿರೆ ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್ ನಾಯ್ಕ್ ಕೋಶಾಧಿಕಾರಿ ಅಖಿಲ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply