Header Ads
Header Ads
Header Ads
Breaking News

ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವ 34 ನೇ ವರ್ಷದ ಪುರುಷರ, ಮಹಿಳೆಯರ ಮುಕ್ತ ಪ್ರೊ ಕಬಡ್ಡಿ ಪಂದ್ಯಾಟ ಪುಂಜಾಲಕಟ್ಟೆಯ ಬಂಗ್ಲೆ ಮೈದಾನದಲ್ಲಿ ಚಾಲನೆ

ಬಂಟ್ವಾಳ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಅದರ ಆಶ್ರಯದಲ್ಲಿ ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಎಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ 34 ನೇ ವರ್ಷದ ಹೊನಲು ಬೆಳಕಿನ ಪುರುಷರ ಮುಕ್ತ ವಿಭಾಗ ಮತ್ತು ಮಹಿಳಾ ಮುಕ್ತ ವಿಭಾಗ ಹಾಗೂ ದ.ಕ. ಜಿಲ್ಲಾಮಟ್ಟದ ಪ್ರೌಡಶಾಲಾ ವಿಭಾಗದ ಸ್ವಸ್ತಿಕ್ ಪ್ರೊ ಕಬಡ್ಡಿ ಪಂದ್ಯಾಟಕ್ಕೆ ಪುಂಜಾಲಕಟ್ಟೆಯ ಬಂಗ್ಲೆ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ಚಾಲನೆ ಸಿಕ್ಕಿತು.

ವಾಮದಪದವು ಶ್ರೀ ಗಣೇಶ ಮಂದಿರದಿಂದ ಹಾಗೂ ಕಿಜನಾರು ಗೀತಾಭಜನಾ ಮಂದಿರದಿಂದ ಹೊರಟ ರಾಣಿ ಅಬ್ಬಕ್ಕ ಕ್ರೀಡಾಜ್ಯೋತಿಯನ್ನು ಪುಂಜಾಲಕಟ್ಟೆ ಗೋಪಾಲಕೃಷ್ಣ ದೇವಸ್ಥಾನದ ಬಳಿ ಸ್ವಾಗತಿಸಿಕೊಳ್ಳಲಾಯಿತು.

ಬಳಿಕ ನಡದ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಲೋಕೇಶ್ ಆಚಾರ್ಯ ಕ್ರೀಡಾಕೂಟ ಉದ್ಘಾಟಿಸಿದರು. ಹರೀಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಂದರ್ ರಾಜ್ ಹೆಗ್ಡೆ, ಸೀತಾರಾಮ ಹೆಗ್ಡೆ, ವಸಂತ ರಾಜ್ ಹೆಗ್ಡೆ, ಕ್ಲಬ್ ನ ಸ್ಥಾಪಕಾಧ್ಯಕ್ಷ ತುಂಗಪ್ಪ ಬಂಗೇರ, ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ ಮತ್ತಿತರರು ಹಾಜರಿದ್ದರು.

Related posts

Leave a Reply