Header Ads
Breaking News

ದ.ಕ. ಜಿಲ್ಲಾ ಎಸ್‌ಕೆಎಸ್‌ಎಸ್‌ಎಫ್‌ನಿಂದ ವಿಖಾಯ ಗ್ರಾಂಡ್ ಸೆಲ್ಯೂಟ್ ಕಾರ್ಯಕ್ರಮ

 

ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇತ್ತೀಚೆಗೆ ಉಂಟಾದ ನೆರೆ ಸಂದರ್ಭಗಳಲ್ಲಿ ಜೀವದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದ ಎಸ್‌ಕೆಎಸ್‌ಎಸ್‌ಎಫ್ ಸಂಘಟನೆಯ ನಿಸ್ವಾರ್ಥ ಸ್ವಯಂ ಸೇವಕ ಘಟಕವಾದ ವಿಖಾಯ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ವಿಖಾಯ ಗ್ರಾಂಡ್ ಸೆಲ್ಯೂಟ್ ಅಕ್ಟೋಬರ್ ೮ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅಬ್ದುಲ್ ರಶೀದ್ ರೆಹ್ಮಾನಿ ಅವರು ಮಾಹಿತಿ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ನಡೆಯುವ ಈ ಕಾರ್ಯಕ್ರಮಕ್ಕೆ ಜಿಲ್ಲಾ ಸಮಿತಿಯ ಕೋಶಾಧಿಕಾರಿ ಕಿನ್ಯ ಅಮೀರ್ ತಂಙಲ್ ಅವರು ಬಂದರ್ ಮೌಲ ದರ್ಗಾ ಝಿಯಾರತ್‌ಗೆ ನೇತೃತ್ವ ನೀಡುವ ಮೂಲಕ ಚಾಲನೆ ನೀಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಧ್ಯಕ್ಷರಾದ ಖಾಸಿಂ ದಾರಿಮಿ, ಸೈಯ್ಯದ್ ಅಮೀರ್ ತಂಙಲ್, ಇಕ್ಬಾಲ್ ಬಾಳಿಲ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply