Header Ads
Header Ads
Breaking News

ದ.ಕ. ಜಿಲ್ಲಾ ಕಬಡ್ಡಿ ಚಾಂಪಿಯನ್‌ಶಿಪ್ ತೊಕ್ಕೊಟ್ಟಿನಲ್ಲಿ ನಡೆದ ಪಂದ್ಯಾಟ

ಉಳ್ಳಾಲ: ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಉಳ್ಳಾಲ ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮಂಗಳೂರು ಇದರ ಸಹಯೋಗದೊಂದಿಗೆ ತೊಕ್ಕೊಟ್ಟು ಸಿಟಿ ಬಸ್‌ಸ್ಯ್ಟಾಂಡ್ ಬಳಿ ಪುರುಷರ ಮತ್ತು ಮಹಿಳೆಯರ ದ.ಕ. ಜಿಲ್ಲಾ ಕಬಡ್ಡಿ ಚಾಂಪಿಯನ್‌ಶಿಪ್ ನಡೆಯಿತು.

ಪುರುಷರ ವಿಭಾಗದಲ್ಲಿ ವಿದ್ಯಾಂಜನೇಯ ಉಳ್ಳಾಲ ತಂಡವು ಬೆಳ್ತಂಗಡಿಯ ವರುಣ್ ಟ್ರಾವೆಲ್ಸ್ ತಂಡವನ್ನು ರೋಚಕ ಪಂದ್ಯಾಟದಲ್ಲಿ ಒಂದು ಅಂಕದಲ್ಲಿ ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡರೆ, ತೃತೀಯ ಸ್ಥಾನವನ್ನು ತತ್ವಮಸಿ ಬಗಂಬಿಲ ಪಡೆದುಕೊಂಡರೆ, ವೆಲ್‌ಕಮ್ ಯೂತ್ ಪ್ರೆಂಡ್ಸ್ ತೊಕ್ಕೊಟ್ಟು ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಪಂದ್ಯಾಟದಲ್ಲಿ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ವರುಣ್ ಟ್ರಾವೆಲ್ಸ್‌ನ ಆಶಿಕ್ ಪಡೆದುಕೊಂಡರೆ, ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ವಿದ್ಯಾಂಜನೇಯ ಉಳ್ಳಾಲದ ಸೂರಜ್ ಪಡೆದುಕೊಂಡರು.

ಉತ್ತಮ ಸವ್ಯಸಾಚಿ ಪ್ರಶಸ್ತಿಯನ್ನು ವಿದ್ಯಾಂಜನೇಯ ಉಳ್ಳಾಲದ ಆಕಾಶ್ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಡಾ| ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರ ತಂಡವು ವಿಕಾಸ್ ಕಾಲೇಜು ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡರೆ, ತೃತೀಯ ಸ್ಥಾನವನ್ನು ವಿಕಾಸ್ ಕಾಲೇಜಿನ ಬಿ. ತಂಡ ಪಡೆದುಕೊಂರೆ, ಚತುರ್ಥ ಸ್ಥಾನವನ್ನು ಡಾ| ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರ ಬಿ. ತಂಡ ಪಡೆದುಕೊಂಡಿತು. ಪಂದ್ಯಾಟದಲ್ಲಿ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ವಿಕಾಸ್ ಕಾಲೇಜಿನ ಪಿಂಕಿ ಪಡೆದುಕೊಂಡರೆ , ಉತ್ತಮ ಹಿಡಿತಗಾರ ಮತ್ತು ಉತ್ತಮ ಸವ್ಯಸಾಚಿ ಪ್ರಶಸ್ತಿಯನ್ನು ರಥಬೀದಿಯ ಡಾ| ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಪಿತಾ ಮತ್ತು ಖತೀಜತ್ತುಲ್ ಖುಬ್ರಾ ಪಡೆದುಕೊಂಡರು. ಅಸೋಸಿಯೇಶನ್‌ನ ಜಿಲ್ಲಾ ಉಪಾಧ್ಯಕ್ಷ ಹಾಗೂ ಗ್ರಾಮಾಂತರದ ಪ್ರಭಾರಿ ಕೆ.ಟಿ.ಸುವರ್ಣ, ಜಿಲ್ಲಾ ಕಾರ್ಯಾದ್ಯಕ್ಷ ರತನ್ ಕುಮಾರ್ ಶೆಟ್ಟಿ, ಪ್ರ, ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಉಳ್ಳಾಲ ಇದರ ಅಧ್ಯಕ್ಷ ಸುರೇಶ್ ಭಟ್ನಗರ, ಕಾರ್ಯಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಉಳ್ಳಾಲ ಇದರ ಮಹಾ ಪೋಷಕ ರವೀಂದ್ರ ಶೆಟ್ಟಿ ಉಳಿದೊಟ್ಟು ಉಪಸ್ಥಿತರಿದ್ದರು.