Header Ads
Breaking News

ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಾ ಗಾಂಧಿ ಪುಣ್ಯತಿಥಿ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯನ್ನ ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಆಚರಿಸಲಾಯ್ತು.ಇದೇ ಸಂದರ್ಭದಲ್ಲಿ ಗಾಂಧಿಜೀಯವರ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡರು ನಮನ ಸಲ್ಲಿಸಿದ್ರು. ಇದೇ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಂಚಾಲಕ ಗೀತಾ ಕೃಷ್ಣನ್ , ದೇಶದಲ್ಲಿ ಇಂದು ಕಂಡು ಬರುತ್ತಿರುವ ಅರಾಜಕತೆಗಳು ನಾವು ಸ್ವಾತಂತ್ರ ಪೂರ್ವದಲ್ಲಿ ನಡೆಸಿದ ಚಳವಳಿಗಳಿಂತಲೂ ಹೆಚ್ಚಿನ ಹೋರಾಟವನ್ನು ನಡೆಸಬೇಕಾದ ಅಗತ್ಯವನ್ನು ಸೃಷ್ಟಿಸಿದೆ. ಅದಕ್ಕಾಗಿ ನಾವು ಮತ್ತೆ ಗಾಂಧಿತ್ವದೆಡೆಗೆ ವಾಪಸಾಗುವ ಸಮಯ ಬಂದಿದೆ ಅಂತಾ ಹೇಳಿದ್ರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಒಂದು ಕಡೆಯಲ್ಲಿ ಗಾಂಧೀಜಿ ಅವರನ್ನು ಗೌರವಿಸಿದ್ರೆ, ಮತ್ತೊಂದು ಕಡೆಯಲ್ಲಿ ಗೋಡ್ಸೆ ಅವರನ್ನು ಪೂಜಿಸುವವರು ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ರು. ದೇಶದ ಮಹಾತ್ಮರ ಜನ್ಮದಿನ ಆಚರಿಸುವುದು, ಪುಣ್ಯ ತಿಥಿಯ ಮೂಲಕ ಅವರನ್ನು ನೆನಪಿಸಿಕೊಳ್ಳುವುದು ನಮ್ಮ ದೇಶದ ಸಂಸ್ಕøತಿ ಎಂದು ಅವರು ಹೇಳಿದ್ರು. ಎಲ್ಲಾ ವರ್ಗದ ಜನರು ಸ್ವಾಭಿಮಾನದಿಂದ ಜೀವನ ನಡೆಸಬೇಕಾದ್ರೆ, ಗಾಂಧೀಜಿಯವರ ಅದರ್ಶವೇ ಸಾಕ್ಷಿಯಾಗಿದೆ. ಗಾಂಧೀಜಿ ಅವರು ಎಲ್ಲಾ ವರ್ಗದ ಜನರಿಗೂ ರೂವಾರಿಯಾಗಿದ್ದಾರೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ರು.
ಇದೇ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ , ಮಾಜಿ ಶಾಸಕರಾದ ಜೆ.ಆರ್.ಲೋಬೋ, ಅಭಯಚಂದ್ರಜೈನ್ , ಕಾಂಗ್ರೆಸ್ ಮುಖಂಡರಾದ ಗೀತಾ ಕೃಷ್ಣನ್, ವಿಥುನ್ ರೈ, ಶಶಿಧರ್ ಹೆಗ್ಡೆ, ಪಾಲಿಕೆ ವಿಪಕ್ಷ ನಾಯಕ ಅಬ್ದುಲ್ ರವೂಫ್ , ನವೀನ್ ಭಂಡಾರಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ , ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ್ ಉಳ್ಳಾಲ್ , ಜಿಲ್ಲಾಪಂಚಾಯತ್ ಸದಸ್ಯ ಶಾವುಲ್ ಹಮೀದ್ ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ರು.

Related posts

Leave a Reply

Your email address will not be published. Required fields are marked *