
ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರಿಗಾಗಿ ಕಸದಿಂದ ರಸ ಶೈಕ್ಷಣಿಕ ಕಾರ್ಯಗಾರವು ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ನಡುಗೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷೆ ಶಾಂಭವಿ ಶೆಟ್ಟಿ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಚಿತ್ರಕಲೆ ಎಂಬುದು ವಿಶೇಷವಾದ ಕಲೆ ಅದು ಸಮಾಜದ ಮತ್ತು ವ್ಯವಸ್ಥೆಯ ಪ್ರತಿಬಿಂಬವಾಗಿ ಮೂಡಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಹವ್ಯಾಸಿ ಕಲಾವಿದೆ ಸುಮತಿ ಶೆಟ್ಟಿ ಕೆಮ್ರಾಲ್ ಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿದರು. ಅವರು ಕಸದಿಂದ ಶೋ ಪೀಸ್ನಂತಹ ವಸ್ತುಗಳ ರಚನೆಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ತೋರಿಸಿದರು.
ಈ ಸಂದರ್ಭ ಉದ್ಯಮಿ ಪುರುಶೋತ್ತಮ ಶೆಟ್ಟಿ, ಕಟೀಲು ಗ್ರಾಮ ಪಂಚಾಯತ್ ಸದಸ್ಯ ತಿಲಕ್ ರಾಜ್ ಶೆಟ್ಟಿ, ಮೆನ್ನಬೆಟ್ಟು ಪಂಚಾಯತ್ ಮಾಜೀ ಅಧ್ಯಕ್ಷ ಗೋವಿಂದ ಪೂಜಾರಿ, ನಡುಗೋಡು ಶಾಲೆ ನಿವೃತ್ತ ಮುಖ್ಯ ಶಿಕ್ಷಕ ವಿಶ್ವನಾಥ ಶೆಟ್ಟಿ, ಹಳೆ ವಿಧ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಹರಿಶ್ಚಂದ್ರ ಆಚಾರ್, ಶಾಲಾಭಿವೃದ್ದಿ ಸಮಿತಿಯ ಮಾಜೀ ಅಧ್ಯಕ್ಷ ಜಗದೀಶ್ ಆಚಾರ್, ಶಾಲಾ ಪ್ರಭಾರ ಮುಖ್ಯೋಪಧ್ಯಾಯ ನಾಗರಾಜ್ ಜಿ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷೆ ರಾಜಶ್ರೀ, ಜಿಲ್ಲಾ ಸಂಘದ ಅಧ್ಯಕ್ಷ ಚೆಮ್ಮಕೇಶವ ಕಾರ್ಯದರ್ಶಿ ಮುರಳೀಧರ್ ಆಚಾರ್, ನಡುಗೋಡು ಶಾಲಾ ಚಿತ್ರಕಲಾ ಶಿಕ್ಷಕ ಸುಂದರ್ ತೋಡಾರ್, ರಂಜನಾ, ಅಂಬಿಕಾ ಮತ್ತಿತರರು ಉಪಸ್ಥಿತರಿದ್ದರು.