
ಪುತ್ತೂರು: ಅಸಂಘಟಿತ ವಲಯದ ಕೃಷಿ ಕೂಲಿ ಕಾರ್ಮಿಕರನ್ನು ತನ್ನ ಸಂಘಕ್ಕೆ ಸೇರಿಸಿ ಸರಕಾರದ ಸವಲತ್ತುಗಳನ್ನು ದೊರಕಿಸಿ ಕೊಡುವ ದ.ಕ.ಜಿಲ್ಲಾ ಜನತಾ ಕೃಷಿ ಕಾರ್ಮಿಕರ ಸಂಘದ ಕಾರ್ಯ ಶ್ಲಾಘನೀಯ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ನಂದನ್ ಶೆಣೈ ಹೇಳಿದರು.
ಅವರು ಅಮರ್ ಕಾಂಪ್ಲೆಕ್ಸ್ನಲ್ಲಿ ದ.ಕ.ಜಿಲ್ಲಾ ಜನತಾ ಕೃಷಿ ಕಾರ್ಮಿಕರ ಸಂಘದ 2ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ದ.ಕ.ಜಿಲ್ಲಾ ಕೃಷಿಕೂಲಿ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಶಿವಾನಂದ ಎಸ್. ಮಳಗಾವಿ ಮಾತನಾಡಿ, ಎರಡನೇ ವರ್ಷಕ್ಕೆ ಕಾಲಿಟ್ಟ ಸಂಘ 900 ಮಂದಿ ಸದಸ್ಯರನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಬಲಪಡಿಸುವ ಮೂಲಕ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಲಾಗುವುದು. ಜತೆಗೆ ಸಂಘದ ಸದಸ್ಯರು, ಮಕ್ಕಳಿಗೆ ಸರಕಾರದ ಸವಲತ್ತುಗಳನ್ನು ಪ್ರಾಮಾಣಿಕ ನೆಲೆಯಲ್ಲಿ ದೊರಕಿಸಿಕೊಡಲಾಗುವುದು ಎಂದರು.ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಯುನಿಕ್ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕವಿತಾ ಮಂಗಳೂರು, ಉಮೇಶ್ ಬದಿನಾರು, ಮುಹಮ್ಮದ್ ಮುಸ್ತಾಫ ಉಪ್ಪಿನಂಗಡಿ, ದೀಕ್ಷಿತಾ ವಿಟ್ಲ ಹಾಗೂ ಅಶ್ವಿನಿ ಎಂ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ 2020-21ನೇ ಸಾಲಿನ ನೂತನ ಅಧ್ಯಕ್ಷೆ ಸುಮತಿ ಎಚ್.ಹೆಗ್ಡೆ,ನೂತನ ಜತೆ ಕಾರ್ಯದರ್ಶಿ ಪ್ರಿಯ ಸಾಲಿಯಾನ್,ಹಿರಿಯ ಸದಸ್ಯ ವಿಶ್ವನಾಥ ಪೂಜಾರಿ,ನಿರ್ದೇಶಕರಾದ ರಾಜು ಹೊಸ್ಮಠ,ಗಣೇಶ್ ಹೆಗ್ಡೆ ಉಪಸ್ಥಿತರಿದ್ದರು.