Header Ads
Header Ads
Breaking News

ದ.ಕ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ನೇತೃತ್ವದ ತಂಡದಿಂದ ಕಾರ್ಯಾಚರಣೆ

 ದಕ್ಷಿಣ ಕನ್ನಡ ಜಿಲ್ಲಾಡಳಿತ, ನಗರ ಪೊಲೀಸ್ ಕಮೀಷನರ್ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ನೇತೃತ್ವದ ತಂಡದಿಂದ ತಂಬಾಕು ಮುಕ್ತ ಮಂಗಳೂರು ವಿಶೇಷ ಕಾರ್ಯಾಚರಣೆಯನ್ನು ನಗರದ ಪದವಿಂಗಡಿ, ಯ್ಯೆಯಾಡಿ ಸೇರಿದಂತೆ ಇತರ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಲಾಯ್ತು.

ಸಾರ್ವಜನಿಕರಿಗೆ ತಂಬಾಕು, ಬೀಡಿ, ಸಿಗರೇಟ್ ಹಾಗೂ ಇನ್ನಿತರ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ನಗರ ಪೊಲೀಸ್ ಕಮೀಷನರ್ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮುಂದಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ನಗರದ ಪದವಿಂಗಡಿ, ಯ್ಯೆಯಾಡಿ ಸೇರಿದಂತೆ ಇತರ ಕಡೆಗಳಲ್ಲಿ ತಂಬಾಕು ಮುಕ್ತ ಮಂಗಳೂರು ವಿಶೇಷ ಕಾರ್ಯಾಚರಣೆ ನಡೆಸಲಾಯ್ತು.

ಇನ್ನು ನಗರದ ಮಾಲ್, ಅಂಗಡಿಗಳಲ್ಲಿ ತೆರಳಿದ ಅಧಿಕಾರಿಗಳು ತಂಬಾಕು, ಬೀಡಿ, ಸಿಗರೇಟ್‌ಗಳನ್ನು ವಶಕ್ಕೆ ಪಡೆದುಕೊಂಡರು, ಉತ್ತೇಜನ ನೀಡುವಂತಹ ರೀತಿಯಲ್ಲಿ ಹಾಗೂ ಆಹಾರ ಪದಾರ್ಥ ಜೊತೆಯಲ್ಲಿ ತಂಬಾಕು, ಸಿಗರೇಟ್ ಹಾಗೂ ಮಾರಾಟ ಮಾಡುವಂತಿಲ್ಲ, ಇನ್ನು ವಿದೇಶಿಯ ಸಿಗರೇಟ್ ಮಾರಾಟ ಮಾಡಿದ್ರೆ , ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಅಂಗಡಿಗಳಿಗೆ ತೆರಳಿದ ದಂಡ ಹಾಕಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಮಾರಾಟ ಮಾಡಿದ್ರೆ ಕ್ರಮ ತೆಗೆದುಕೊಳ್ಳಲಾಗುವುದು. ಡಿಸಿಪಿ ಉಮಾಪ್ರಶಾಂತ್ ಆದೇಶದ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರರಾದ ಡಾ| ಪ್ರೀತಿ.ಸಿ.ಶೇಖರ್ ಹೇಳಿದರು.

ಇನ್ನು ಕಾರ್ಯಾಚರಣೆಯಲ್ಲಿ ಡಾ|ಜಾನ್ ಕೆನಾಡಿ, ಕಂಕನಾಡಿ ಠಾಣೆಯ ಪಿಎಸ್‌ಐ ಪ್ರದೀಪ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ರು.

Related posts

Leave a Reply