Header Ads
Header Ads
Breaking News

ದ.ಕ. ಜಿಲ್ಲಾ ನೀರು ಮತ್ತು ನೈಮರ್ಲ್ಯ ಸಮಿತಿ ಸಭೆ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲೆಯ ನೈಮರ್ಲ್ಯಗಳ ಕುರಿತು ಚರ್ಚೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ನೀರು ಮತ್ತು ನೈಮರ್ಲ್ಯ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಮೀನಾಕ್ಷಿ ಶಾಂತಿಗೋಡು ವಹಿಸಿದ್ದರು. ಪುತ್ತೂರು ತಾಲೂಕಿನ ಶಿರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡ್ಯ ಎಂಬಲ್ಲಿ ಸಾರ್ವಜನಿಕ ಶೌಚಾಲಯಕ್ಕೆ 3.50 ಲಕ್ಷ ಅನುದಾನವನ್ನು ಠೇವಣಿ ಇರಿಸಿದ್ದು ಅಂದಾಜು ಪಟ್ಟಿಯನ್ನು ತಯಾರಿಸಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

2017-18 ನೇ ಸಾಲಿನಲ್ಲಿ ಇಂಜಾಡಿ ಎಂಬಲ್ಲಿ ಎರಡು ಘಟಕಗಳ ಶೌಚಾಲಯ ಕಾಮಗಾರಿ ಪ್ರಾರಂಭಿಸಲು ಆಡಳಿತ ಮಂಜೂರಾತಿ ನೀಡಲಾಗಿದೆ ನೆಲ ಸಮತಟ್ಟಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಭೆಯಲ್ಲಿ ಸದಸ್ಯರು ಸ್ಪಷ್ಟನೆ ನೀಡಿದರು.

ಬಂಟ್ವಾಳ ತಾಲೂಕಿನ ಗೋಳ್ತಮಜಲು ಮತ್ತು ಬಾಳ್ತಿಲ ಗ್ರಾಮ ಪಂಚಾಯತ್‌ನ ದ್ರವ ತ್ಯಾಜ್ಯ ಸಂಸ್ಕರಣಾ ಘಟಕ ಎರಡನೇ ಹಂತದ ಕಾಮಗಾರಿಗಳು ಸಂಪೂರ್ಣಗೊಂಡಿದೆ. ಬಿಡುಗಡೆಯಾದ ಅನುದಾನವನ್ನು ವಿನಿಯೋಗಿಸಿದ ಬಗ್ಗೆ ಬಳಕೆ ಪ್ರಮಾಣ ಪತ್ರವನ್ನು ಲೆಕ್ಕ ಶಾಲೆಗೆ ನೀಡಲಾಗಿದೆ. ಇದೀಗ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿದೆ ಎಂದು ಅಧ್ಯಕ್ಷರಿಗೆ ಸದಸ್ಯರು ಮಾಹಿತಿ ನೀಡಿದರು.
ಈ ಸಂದರ್ಭ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ‌ಇ‌ಒ ರವಿ, ಸವುದ್ ಹಮೀದ್ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ: ಶರತ್