Header Ads
Header Ads
Breaking News

ದ.ಕ. ಜಿಲ್ಲಾ ಮಟ್ಟದ ಕಬಡ್ಡಿ ಟೂರ್ನಮೆಂಟ್ ವಿಕಾಸ್ ಪಿಯು ಕಾಲೇಜ್ ಮೈದಾನದಲ್ಲಿ ಸ್ಪರ್ಧೆ ಜಗದೀಶ್ ಕುಂಬಳೆ ಅವರಿಂದ ಟೂರ್ನಮೆಂಟ್ ಉದ್ಘಾಟನೆ

ಮಂಗಳೂರಿನ ಮೇರಿಹಿಲ್‌ನಲ್ಲಿರುವ ವಿಕಾಸ್ ಪದವಿಪೂರ್ವ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಕಬಡ್ಡಿ ಟೂರ್ನಮೆಂಟ್‌ನ ಉದ್ಘಾಟನಾ ಸಮಾರಂಭ ನಡೆಯಿತು. ವಿಕಾಸ್ ಪಿಯು ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡ ಕಬಡ್ಡಿ ಟೂರ್ನಮೆಂಟನ್ನು ಎನ್‌ಐ‌ಎಸ್ ಕೋಚ್ ಜಗದೀಶ್ ಕುಂಬಳೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಸೊಗಡಿನ ಕ್ರೀಡೆಯಾದ ಕಬಡ್ಡಿ ಪಂದ್ಯಾಟ ಪ್ರೊ ಕಬಡ್ಡಿಯ ಮೂಲಕ ದೇಶ ವಿದೇಶದಲ್ಲಿ ಹೆಸರನ್ನು ಗಳಿಸಿದೆ. ಎಲ್ಲರೂ ಇವತ್ತು ಕಬಡ್ಡಿ ಪಂದ್ಯಾಟವನ್ನು ಇಷ್ಟಪಡುವಂತಾಗಿದೆ ಎಂದು ಹೇಳಿದರು.

ಅನಂತರ ವಿಕಾಸ್ ಎಜ್ಯುಕೇಶನ್ ಟ್ರಸ್ಟ್‌ನ ಚೇರ್‌ಮೆನ್ ಕೃಷ್ಣ ಜೆ. ಪಾಲೇಮಾರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ ಕಬಡ್ಡಿ ಪಂದ್ಯಾಟವನ್ನು ಜಿಲ್ಲಾಡಳಿತ ವಿಕಾಸ್ ಕಾಲೇಜಿನಲ್ಲಿ ನಡೆಸುತ್ತಿರುವುದು ಹೆಮ್ಮೆಯ ವಿಚಾರ ಎಂದ ಅವರು, ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಿಯು ಶಿಕ್ಷಣ ಮಂಡಳಿಯ ನಿರ್ದೇಶಕರಾದ ಕೆ.ಆರ್. ತಿಮ್ಮಯ್ಯ, ಕ್ರೀಡಾ ಆಯೋಜಕ ಪ್ರೇಮನಾಥ್ ಶೆಟ್ಟಿ, ಪ್ರಿನ್ಸಿಪಾಲ್ ಪೊ. ಟಿ. ರಾಜರಾಮ್ ರಾವ್, ಪಾರ್ತಸಾರತಿ ಜೆ, ಪಾಲೇಮಾರ್, ಡಾ. ಡಿ. ಶ್ರೀಪತಿ ರಾವ್, ರಮೇಶ್ ಪೂಜಾರಿ ಉಪಸ್ಥಿತರಿದ್ದರು.

ವರದಿ: ಶರತ್