Header Ads
Header Ads
Breaking News

ದ.ಕ. ಜಿಲ್ಲಾ ಮಟ್ಟದ ಯುವಜನ ಮೇಳ : ಚಿತ್ರಾಪುರದಲ್ಲಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳವು ಡಿಸೆಂಬರ್ 15 ಮತ್ತು 16ರಂದು ಮಂಗಳೂರಿನ ಚಿತ್ರಾಪುರದ ದೇವಸ್ಥಾನ ಬಳಿ ಹಾಗೂ ತಣ್ಣೀರುಬಾವಿಯ ಶ್ರೀಕೃಷ್ಣ ರಂಗ ಮಂದಿರದಲ್ಲಿ ನಡೆಯಲಿದ್ದು ಭರದಿಂದ ಸಿದ್ಧತೆಗೊಳ್ಳುತ್ತಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಮಂಗಳೂರು ಮಹಾನಗರದ ಪಾಲಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ತಣ್ಣೀರುಬಾವಿ ಯುವಕ-ಯುವತಿ ಮಂಡಲ ಚಿತ್ರಾಪುರ ಕುಮಾರಿ ಶಿವಾನಿ ನೆನಪಿನಲ್ಲಿ ಯುವಜನ ಮೇಳ ನಡೆಯಲಿದೆ. ಈಗಾಗಲೇ ಚಿತ್ರಾಪುರದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿದ್ದು, ವೇದಿಕೆ ಸಜ್ಜುಗೊಂಡಿದೆ. ಡಿಸೆಂಬರ್ 15ರಂದು ಸಚಿವ ಯು.ಟಿ. ಖಾದರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವರು, ಇನ್ನೂ ಯುವಜನ ಮೇಳಕ್ಕೆ ಜಿಲ್ಲೆಯಿಂದ ವಿವಿಧ ತಂಡಗಳು ಆಗಮಿಸಲಿದ್ದು, ಸಾಂಸ್ಕೃತಿಕ ಕಲರವ ಮೇಳೈಸಲಿದೆ.

Related posts

Leave a Reply