Breaking News

ದ. ಕ. ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆ, ಮಿಥುನ್ ರೈ ಬೆಂಬಲಿಗರ ಜಯ

ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆಯ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು, ಮಿಥುನ್ ರೈ ಬೆಂಬಲಿಗರು ಮೇಲುಗೈ ಸಾಧಿಸಿದ್ದಾರೆ.
ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದಿರುವ ಚುನಾವಣೆಯಲ್ಲಿ ಅಭ್ಯರ್ಥಿಗಳಾದ ಮಿಥುನ್ ಹಾಗೂ ಲುಕ್ಮಾನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಮಿಥುನ್ ಗೆಲುವು ಸಾಧಿಸಿದ್ದಾರೆ. ಮಿಥುನ್ ರೈ ಬೆಂಬಲಿತರು ಸುಳ್ಯದಲ್ಲಿ ಸಿದ್ದಿಕ್, ಮೂಡಬಿದರೆಯಲ್ಲಿ ಚಂದ್ರಹಾಸ ಸನಿಲ್, ಬೆಳ್ತಂಗಡಿಯಲ್ಲಿ ಆಭಿನಂದನ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಗಿರೀಶ್ ಆಳ್ವ, ಬಂಟ್ವಾಳದಲ್ಲಿ ಪ್ರಶಾಂತ್ ಕುಮಾರ್ ಹಾಗೂ ಪುತ್ತೂರಿನಲ್ಲಿ ಯು. ಟಿ. ತೌಸಿಫ್ ಜಯಗಳಿಸಿದ್ದಾರೆ.

Related posts

Leave a Reply