Header Ads
Breaking News

ದ.ಕ. ಜಿಲ್ಲಾ ಹಾಲು ಒಕ್ಕೂಟದಿಂದ ವಿಶ್ವ ಯೋಗ ದಿನಾಚರಣೆ : ಯೋಗದಲ್ಲಿ ಪಾಲ್ಗೊಂಡ ಕೆಎಂಎಫ್ ಸಿಬ್ಬಂದಿ

ಮಂಗಳೂರಿನ ಕುಲಶೇಖರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟ ಮತ್ತು ಶ್ರೀ ಪತಂಜಲಿ ಯೋಗ ಸಮಿತಿ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಎಸ್‌ಪಿವೈಎಸ್‌ಎಸ್‌ನ ಸಂಚಾಲಕರಾದ ಗೋಕುಲಣ್ಣ ಅವರು ದೀಪ ಬೆಳಗಿಸಿ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಜಿ.ವಿ ಹೆಗ್ಡೆ ಅವರು ಮಾತನಾಡಿ, ಯೋಗ ದಿನವನ್ನು ಇಡೀ ದೇಶದೆಲ್ಲೆಡೆ ಆಚರಿಸುತ್ತಿದ್ದಾರೆ. ಸುಮಾರು 180 ದೇಶಗಳಲ್ಲಿ ಯೋಗ ಶಿಬಿರಗಳನ್ನು ಆಯೋಜಿಸಿದ್ದಾರೆ. ಈ ಬಾರಿ ಹೃದಯಕ್ಕಾಗಿ ರೋಗ ಎಂಬ ಘೋಷಣೆಯೊಂದಿಗೆ ಯೋಗ ದಿನಾಚರಣೆಯನ್ನು ಆಚರಿಸಿಕೊಳ್ಳಲಾಗಿದೆ. ನಮ್ಮ ಹೃದಯವನ್ನು ಹೇಗೆ ಆರೋಗ್ಯದಲ್ಲಿಡಬೇಕು ಎಂಬುವದರ ಬಗ್ಗೆ ಯೋಗ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಆನಂತರ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯನ ಆರೋಗ್ಯವನ್ನು ಕಾಪಾಡುವ ವಿಧಿ ವಿಧಾನ ಎಂದರೆ ಅದು ಯೋಗ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದಿಂದ ಯೋಗಕ್ಕೆ ಒಂದು ಮಹತ್ವ ಸಿಕ್ಕಿದೆ ಎಂದು ಹೇಳಿದರು.
ಇದೇ ವೇಳೆ ಶ್ರೀ ಪತಂಜಲಿ ಯೋಗ ಕರ್ನಾಟಕ ವತಿಯಿಂದ ಯೋಗ ಶಿಬಿರ ನಡೆಯಿತು. ಯೋಗ ತರಬೇತುದಾರ ಗೋಕುಲಣ್ಣ ಅವರು ಯೋಗಾಸನ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಈ ಸಂದರ್ಭ ಡಾ. ನಿತ್ಯಾನಂದ ಭಕ್ತ, ಮಾರ್ಕೆಟಿಂಗ್ ಆಫೀಸರ್ ಎಂ. ರವಿ, ಗೀತಾ ಶೆಟ್ಟಿ, ಜಗದೀಶಯ್ಯ, ಶ್ರೀನಿವಾಸಯ್ಯ, ಸತೀಶ್, ಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *