Header Ads
Header Ads
Header Ads
Header Ads
Header Ads
Header Ads
Breaking News

ದ.ಕ ಜಿಲ್ಲೆಯಲ್ಲಿ ಎಡೆಬಿಡೆದೆ ಸುರಿಯುತ್ತಿರುವ ಮಳೆ : ಸಂಪೂರ್ಣ ಕೊಚ್ಚಿ ಹೋದ ರಾಷ್ಟ್ರೀಯ ಹೆದ್ದಾರಿ

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಾಣೆಮಂಗಳೂರಿನ ಸಮೀಪ ಮಂಗಳೂರು- ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕೊಚ್ಚಿ ಹೋಗಿದೆ. ಇದೆ ಸ್ಥಿತಿ ರಸ್ತೆಯುದ್ದಕ್ಕೂ ಇದೆ. ಹೆದ್ದಾರಿಯುದ್ದಕ್ಕೂ ಹೊಂಡಗಳು ನಿರ್ಮಾಣಗೊಂಡು ವಾಹನ ಚಾಲಕರು ಸಂಚರಿಸಲು ಪರದಾಡಬೇಕು. ಒಂದೊಂದು ಹೊಂಡವೂ ಒಂದೊಂದು ಆಳ, ಅಗಲವನ್ನು ಹೊಂದಿದ್ದು ಮರಣ ಗುಂಡಿಗಳಂತೆ ಅಪಾಯವನ್ನು ಆಹ್ವಾನಿಸುತ್ತಿದೆ. ಪ್ರತೀ ಹೊಂಡವನ್ನು ಪ್ರದಕ್ಷಿಣೆ ಹಾಕಿ ವಾಹನಗಳು ಮುಂದೆ ಸಾಗಬೇಕಾದರೆ ಹರ ಸಾಹಸ ಪಡಬೇಕು.ಇನ್ನೂ ರಾತ್ರಿ ವೇಳೆಯಂತೂ ಈ ರಸ್ತೆಯಲ್ಲಿ ಸಂಚರಿಸುವುದು ಇನ್ನೂ ಅಪಾಯ. ಬೀದಿ ದೀಪಗಳು ಉರಿಯದೆ ವಾಹನದ ಹೆಡ್ ಲೈಟನ್ನು ಆಸರೆಯಾಗಿ ಚಲಿಸಬೇಕಾದ ಅನಿವಾರ್ಯತೆ. ಮುಂಭಾಗದಲ್ಲಿ ಬತುವ ವಾಹನದ ಪ್ರಕರ ಬೆಳಕನ್ನು ತಡೆಯಲಾಗದೆ ಒಮ್ಮೆ ಒಂದು ಹೊಂಡಕ್ಕೆ ಬಿದ್ದರೆ ವಾರಗಟ್ಟೆಲೆ ವಾಹನವನ್ನು ಗ್ಯಾರೇಜ್ ನಲ್ಲಿ ಇಡಬೇಕಾದ ಸ್ಥಿತಿ. ದ್ವಿಚಕ್ರ ವಾಹನ ಸವಾರರಂತೂ ಪ್ರಾಣ ಅಂಗೈಲಿಟ್ಟುಕೊಂಡು ಹೋಗ ಬೇಕಾದ ದುಸ್ಥಿತಿ ಈ ರಾಷ್ಟ್ರೀಯ ಹೆದ್ದಾರಿಯದ್ದು. ಬೇಕಾಬಿಟ್ಟಿ ಟೋಲ್ ಸಂಗ್ರಹಿಸುವ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸರ್ವ ಋತುವಿಗೂ ಬೇಕಾದ ರಸ್ತೆಯನ್ನು ಯಾಕೆ ನಿರ್ಮಿಸಿ ಕೊಡುವುದಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಇನ್ನೂ ಮುಂದೆಯಾದರು ಅದೇ ಹೊಂಡಕ್ಕೆ ತೇಪೆಯಾಕಿ ಕಣ್ಣೊರೆಸುವ ತಂತ್ರ ಮಾಡುವ ಬದಲು ಶಾಶ್ವತವಾದ ಹಾಗೂ ಸರ್ವಋತು ಉಪಯೋಗದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿರ್ಮಿಸಿ ಕೊಡಲಿ ಎಂದು ಜನರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *