Header Ads
Breaking News

ದ.ಕ. ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ ಮೂಲ ಪತ್ತೆ ಹಚ್ಚುವಲ್ಲಿ ಜಿಲ್ಲಾಡಳಿತ ವಿಫಲ : ಐವನ್ ಡಿಸೋಜಾ ಆರೋಪ

ದ.ಕ. ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಆದರೆ ಇದರ ಮೂಲ ಪತ್ತೆ ಹಚ್ಚುವಲ್ಲಿ ಜಿಲ್ಲಾಡಳಿತ ವಿಫಲರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿ ಏ.19, ಎರಡನೇ ಬಲಿ ಏ.24ಕ್ಕೆ ಎಪ್ರಿಲ್ 30ಕ್ಕೆ ಮೂರನೇ ಬಲಿಯಾಗಿದೆ. ಇಷ್ಟು ಆತಂಕಕಾರಿ ಘಟನೆ ನಡೆದ್ರು ಮೂಲ ಇನ್ನೂ ಪತ್ತೆಯಾಗಿಲ್ಲ
ಘಟನೆ ನಡೆದು ಹದಿನೆಂಟು ದಿನಗಳಾಗಿದೆ. ಜಿಲ್ಲಾಡಳಿತ ಇದರಲ್ಲಿ ವಿಫಲತೆ ಕಂಡಿದೆ.ಫಸ್ಟ್ ನ್ಯೂರೋದಿಂದ ಈ ಸೋಂಕು ಹಬ್ಬಿ ಬಲಿಯಾಗಿದೆ. ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳ್ತಾರೆ ಆದರೆ ಇದುವರೆಗೆ ಮೂಲ ಕಂಡುಕೊಳ್ಳುವಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ವಿಫಲಗೊಂಡಿದ್ದಾರೆ. ಫಸ್ಟ್ ನ್ಯೂರೋದಿಂದ ಸೊಂಕು ಹರಡಿದ ಬಗ್ಗೆ ತನಿಖೆ ನಡೆಸುತ್ತಿಲ್ಲ, ತನಿಖೆ ನಡೆಸದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.

ಇನ್ನು ಜಿಲ್ಲೆಯಲ್ಲಿರುವ ಹೊರ ರಾಜ್ಯದ ಕಾರ್ಮಿಕರು ತಮ್ಮ ಊರಿಗೆ ತೆರಳುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಐವನ್ ಡಿಸೋಜಾ ಅವರು, ಜಿಲ್ಲಾಡಳಿತದಿಂದ ಎಲ್ಲಾ ಕಾರ್ಮಿಕರಿಗೆ ರೈಲು ಸಂಚಾರ ವ್ಯವಸ್ಥೆ ಇದೆ. ಆದರೆ ಇದ್ರಲ್ಲೂ ಕೇಂದ್ರ ಸರ್ಕಾರ ಕಾರ್ಮಿಕರಿಂದ ಹಣ ವಸೂಲಿ ಮಾಡಿದೆ. ಕೆಎಸ್‍ಆರ್ಟಿಸಿ ಬಸ್‍ಗೆ 40 ರೂಪಾಯಿ ಮತ್ತು ರೈಲಿನಲ್ಲಿ ಸಂಚರಿಸುವ ಕಾರ್ಮಿಕರಿಂದ ಹಣ ವಸೂಲಿ ಮಾಡಿದ್ದಾರೆ ಎಂದು ಐವನ್ ಆರೋಪಿಸಿದರು.

ಕಾರ್ಮಿಕರನ್ನು ಕಳುಹಿಸಿಕೊಡುವಲ್ಲಿ ಸರ್ಕಾರದ ನಿರ್ದೇಶನವನ್ನು ಜಿಲ್ಲಾಡಳಿತ ಪಾಲಿಸಿಲ್ಲ ಸೇವಾ ಸಿಂಧೂ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರ ಆದೇಶ ಮಾಡಿದೆ. ಆದ್ರೆ ಸರ್ಕಾರದ ಆದೇಶ ಇದ್ರು ಜಿಲ್ಲಾಡಳಿತ ಯಾವುದನ್ನು ಪಾಲಿಸಿಲ್ಲ. ಕಾರ್ಮಿಕರನ್ನು ಯಾವುದೇ ಭದ್ರತೆ ಇಲ್ಲದೆ ರೈಲ್ವೆ ನಿಲ್ದಾಣಕ್ಕೆ ಶಿಫ್ಟ್ ಮಾಡಲಾಗಿದೆ. ರೈಲ್ವೆ ನಿಲ್ದಾಣದಿಂದ ಜಿಲ್ಲಾಡಳಿತ ಹಣ ಸುಲಿಗೆ ಮಾಡಿದೆ. ಜಿಲ್ಲೆಯ ಸಂಸದರು ಎಲ್ಲಿದ್ದಾರೆ ಈಗಾ ಧ್ವನಿ ಎತ್ತಲಿ, ಅಸಂಘಟಿತ ಕಾರ್ಮಿಕರ ಧ್ವನಿಯಾಗಲಿ. ಅಂತರಾಜ್ಯ ಸಮಸ್ಯೆಗಳ ಸಂಸದರಾಗಿ ಧ್ವನಿ ಎತ್ತ ಬೇಕು ಎಂದು ಹೇಳಿದರು.

Related posts

Leave a Reply

Your email address will not be published. Required fields are marked *