Header Ads
Breaking News

ದ.ಕ ಜಿಲ್ಲೆಯಲ್ಲಿ ಕೊರೊನಾ ಪತ್ತೆ ಹಚ್ಚುವ ಆ್ಯಂಟಿಜೆನ್ ಟೆಸ್ಟ್ ಆರಂಭ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಶೀಘ್ರ ಪತ್ತೆ ಹಚ್ಚುವ ಆ್ಯಂಟಿಜೆನ್ ಟೆಸ್ಟ್‍ನ್ನು ಮಂಗಳವಾರದಿಂದ ಆರಂಭಿಸಲಾಗಿದೆ.ಆ್ಯಂಟಿಜೆನ್ ಟೆಸ್ಟ್‍ನಿಂದ 15 ರಿಂದ 20 ನಿಮಿಷದಲ್ಲಿ ಕೋವಿಡ್ ಪಾಸಿಟಿವ್ ಪತ್ತೆ ಹಚ್ಚಲಾಗುತ್ತದೆ. ಈ ಹಿಂದೆ ಕೋವಿಡ್ ಪತ್ತೆಗೆ ಎರಡು ದಿನಗಳ ಕಾಲ ಕಾಯಬೇಕಿತ್ತು. ದಕ್ಷಿಣ ಕನ್ನಡ ಜಿಲ್ಲೆಗೆ ಇಂತಹ 3500 ಕಿಟ್ ಬಂದಿದ್ದು, ಈ ಕಿಟ್‍ಗಳನ್ನು ತುರ್ತು ಸಂದರ್ಭದಲ್ಲಿ ಉಪಯೋಗಿಸಲಾಗುತ್ತದೆ.

ಈ ಕಿಟ್‍ನಲ್ಲಿ ಇರುವ ಸ್ಟ್ರಿಪ್‍ನಲ್ಲಿ ಗಂಟಲು ದ್ರವದ ಮಾದರಿಯ ಹನಿಯನ್ನು ಹಾಕಿದರೆ 15 ನಿಮಿಷದಲ್ಲಿ ಫಲಿತಾಂಶ ಸಿಗುತ್ತದೆ. ಸ್ಟಿಪ್‍ನಲ್ಲಿ ಕೆಂಪು ಬಣ್ಣದ ಗೆರೆ ಬಂದರೆ ಪಾಸಿಟಿವ್ ಎಂದು ಗೆರೆ ಬಾರದಿದ್ದರೆ ನೆಗೆಟಿವ್ ಎಂದು ಫಲಿತಾಂಶ ಬರಲಿದೆ. ಸದ್ಯಕ್ಕೆ ವಿದೇಶದಿಂದ ಬಂದವರು, ಸರ್ಜರಿ ಮಾಡುವವರು ಮತ್ತು ಸಾವನ್ನಪ್ಪಿದವರ ಕೋವಿಡ್ ಟೆಸ್ಟ್‍ಗೆ ಬಳಸಲಾಗುತ್ತದೆ.

Related posts

Leave a Reply

Your email address will not be published. Required fields are marked *