Header Ads
Header Ads
Breaking News

ದ.ಕ ಜಿಲ್ಲೆಯಲ್ಲಿ ಡೆಂಗ್ಯೂ ಹಾವಳಿ : ಡೆಂಗ್ಯೂಗೆ ಖಾಸಗಿ ಟಿವಿ ಕ್ಯಾಮರಾಮ್ಯಾನ್ ನಾಗೇಶ್ ಮೃತ್ಯು

ದ.ಕ. ಜಿಲ್ಲಾಡಳಿತ, ಮನಪಾದಿಂದ ತೀವ್ರ ಕಾರ್ಯಾಚರಣೆಯ ಹೊರತಾಗಿಯೂ ನಗರದಲ್ಲಿ ಡೆಂಗ್ ಹಾವಳಿ ಮುಂದುವರಿದಿದ್ದು, ಖಾಸಗಿ ಸುದ್ದಿವಾಹಿನಿ ಕ್ಯಾಮರಾಮ್ಯಾನ್ ನಾಗೇಶ್ ಪಡು(35) ಎಂಬವರು ಡೆಂಗ್‌ನಿಂದ ನಿನ್ನೆ ತಡರಾತ್ರಿ ಮೃತಪಟ್ಟಿದ್ದಾರೆ.
ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನಾಗೇಶ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಡೆಂಗ್ ಬಾಧಿಸಿರುವುದು ಪತ್ತೆಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Related posts

Leave a Reply

Your email address will not be published. Required fields are marked *