
ದ.ಕ ಜಿಲ್ಲೆ ಸೌಹಾರ್ದತೆಗೆ, ಏಕತೆಗೆ, ಒಗ್ಗಟ್ಟಿಗೆ ಹೆಸರುವಾಸಿಯಾದ ಜಿಲ್ಲೆ. ಇತ್ತೀಚಿನ ದಿನಗಳಲ್ಲಿ ದ.ಕ ಜಿಲ್ಲೆಯ ಸೌಹಾರ್ದತೆಗೆ ಧಕ್ಕೆ ತರುವಂತಹ ಕೆಲಸ ನಡಿತಾ ಇದೆ ಎಂದು ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದ್ರು.
ಶ್ರೀ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ ಕೊಟ್ಟಾರ, ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಬಾಬುಗುಡ್ಡೆ, ದೈವರಾಜ ಶ್ರೀ ಕೋರ್ದಬ್ಬು ದೈವಸ್ಥಾನ ಬಾಬುಗುಡ್ಡೆ ಈ ಮೂರು ದೈವಸ್ಥಾನಗಳಲ್ಲಿ ವಿಕೃತ ಮನೋಭಾವನೆ ಇರುವ ಯಾರೋ ಕಿಡಿಗೇಡಿಗಳು ತುಳುನಾಡಿನ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ದೈವಸ್ಥಾನದ ಹುಂಡಿಯಲ್ಲಿ ನಕಲಿ ನೋಟು ಹಾಕಿ ಅದ್ರಲ್ಲಿ ಕೆಟ್ಟ ರೀತಿಯಲ್ಲಿ ಬರೆದು ಧರ್ಮಕ್ಕೆ ನಿಂದನೆ ಮಾಡುವ ಕೆಲಸ ಮಾಡಿದ್ದಾರೆ. ಈ ಕೃತ್ಯ ಮಾಡಿದವರು ಯಾರೇ ಇರಲಿ ಅವರು ದ.ಕ ಜಿಲ್ಲೆಗೆ ಕಪ್ಪು ಚುಕ್ಕೆ ಬರುವ ಕೆಲಸ ಮಾಡಿದ್ದಾರೆ. ಅವರಿಗೆ ನಾವೆಲ್ಲರೂ ಸೇರಿ ಕಠಿಣ ಶಿಕ್ಷೆ ಆಗುವವರೆಗೂ ಆಗ್ರಹಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಅವರಿಗೆ ಶಿಕ್ಷಯಾಗಬೇಕು ಎಂದು ಆಗ್ರಹಿಸಿದ್ರು. ಈ ವೇಳೆ ಮಹಾನಗರ ಪಾಲಿಕೆಯ ಸದಸ್ಯ ಪ್ರವೀಣ್ ಆಳ್ವ, ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ದೈವರಾಜ ಶ್ರೀ ಕೋರ್ದಬ್ಬು ದೈವಸ್ಥಾನದ ಗುರಿಕಾರ ಹೊನ್ನಯ್ಯ, ಸಾಮಾಜಿಕ ಜಾಲತಾಣದ ಅಧ್ಯಕ್ಷ ರಘುರಾಜ್ ಕದ್ರಿ, ಸದಾಶಿವ ರಾವ್, ಡಿಕೆ ಸುಧೀರ್ ಉಪಸ್ಥಿತರಿದ್ದರು.