Header Ads
Breaking News

ದ.ಕ. ಜಿಲ್ಲೆಯ ಪೌರ ಸಮನ್ವಯ ಸಮಿತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

ಕೇಂದ್ರ ಸರಕಾರವು ಜಾರಿಗೆ ತಂದಿರುವ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹಾಗೂ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವನ್ನು ಖಂಡಿಸಿ `ಪೌರ ಸಮನ್ವಯ ಸಮಿತಿ ದ.ಕ.ಜಿಲ್ಲೆ’ ಇದರ ವತಿಯಿಂದ ನಗರ ಹೊರವಲಯದ ಜಪ್ಪಿನಮೊಗರುವಿನ ಮಹಾತ್ಮಾಗಾಂಧಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೇದಿಕೆಯಲ್ಲಿ ರವಿವಾರ ಪೌರತ್ವ ಸಂರಕ್ಷಣಾ ಸಮಾವೇಶ ನಡೆಯಿತು.

ಸಮಾವೇಶದಲ್ಲಿಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹರ್ಯಾಣದ ಮಾಜಿ ಶಾಸಕ, ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ನರೇಂದ್ರ ಮೋದಿ 2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾದ ಕೆಲವೇ ತಿಂಗಳಲ್ಲೇ ಕೋಮು ಗಲಭೆ ನಡೆದಿತ್ತು. ಅಂದು ಪೊಲೀಸರನ್ನು ತಡೆದಂತೆ ಇತ್ತೀಚೆಗೆ ದೆಹಲಿಯಲ್ಲಿ ಗಲಭೆ ನಡೆದಾಗ ಅಮಿತ್ ಶಾ ಪೊಲೀಸರನ್ನು ತಡೆಯುವ ಮೂಲಕ ಗಲಭೆಗೆ ಬೆಂಬಲ ನೀಡಿದ್ದಾರೆ. ಆ ಮೂಲಕ ಗುಜರಾತ್ ಮಾದರಿಯಲ್ಲೇ ದೆಹಲಿಯಲ್ಲಿ ಹಿಂಸಾಚಾರ ನಡೆದಿದೆ ಎಂದು ಹೇಳಿದರು.

ವಿಧಾನ ಸಭೆಯ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಮಾತನಾಡಿ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವ ಅವಕಾಶವನ್ನು ಸಂವಿಧಾನ ಯಾರಿಗೂ ಕೊಟ್ಟಿಲ್ಲ, ಕೊಡುವುದೂ ಇಲ್ಲ. ಬಿಜೆಪಿಗೆ ಬಹುಮತವಿದ್ದ ಮಾತ್ರಕ್ಕೆ ಸಂವಿಧಾನ ವಿರೋಧಿ ನಿರ್ಣಯ ಕೈಗೊಳ್ಳುವ ಅಧಿಕಾರವಿಲ್ಲ. ಬಿಜೆಪಿಗರು ಸಿಎಎ, ಎನ್‍ಆರ್‍ಸಿ ಜಾರಿಗೆ ಯತ್ನಿಸುತ್ತಿದ್ದರೆ ನಾವು ಅದಕ್ಕೆ ಎದೆಯೊಡ್ಡಿ ನಿಂತಿದ್ದೇವೆ. ಕೊಂದರೆ ಎಷ್ಟು ಜನರನ್ನು ನೀವು ಕೊಲ್ಲಬಲ್ಲಿರಿ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಬಿಎಂ ಫಾರೂಕ್, ನಸೀರ್ ಅಹ್ಮದ್, ಸೈಯದ್ ಮದನಿ ಶರೀಅತ್ ಕಾಲೇಜಿನ ಪ್ರಾಂಶುಪಾಲ ಅಲ್‍ಹಾಜ್ ಉಸ್ಮಾನ್ ಫೈಝಿ ತೋಡಾರ್, ಎಸ್‍ಕೆಎಸ್‍ಎಂ ಸಂಘಟನೆಯ ಮುಖಂಡ ಎಂಜಿ ಮುಹಮ್ಮದ್, ಸಿಪಿಎಂ ಮುಖಂಡ ಕೃಷ್ಣಪ್ಪ ಸಾಲ್ಯಾನ್ ಮೊದಲಾದವರು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *